Connect with us

    LATEST NEWS

    ಸಡಗರದ ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ

    ಸಡಗರದ ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ

    ಮಂಗಳೂರು ಅಕ್ಟೋಬರ್ 10: ಮಂಗಳೂರು ದಸರಾ ಉತ್ಸವಕ್ಕೆ ಇಂದು ಚಾಲನೆ ದೊರೆತಿದೆ. ಮೈಸೂರಿನಂತೆಯೇ ಮಂಗಳೂರು ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ನಗರದ ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶಕ್ತಿಯ ಪ್ರತೀಕವಾದ ನವದುರ್ಗೆಯರ ಪ್ರತಿಷ್ಟಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ.

    ಕರಾವಳಿಯ ಸು0ದರ ನಗರಿ ಮಂಗಳೂರು ನಗರದಲ್ಲಿ ಈಗ ನವರಾತ್ರಿಯ ಸಂಭ್ರಮ ಸಡಗರ . ವರ್ಷದಿಂದ ವರ್ಷಕ್ಕೆ ಈ ನವರಾತ್ರಿಯ ವೈಭವ ಮಂಗಳೂರಿನಲ್ಲಿ ವೃದ್ದಿಸುತ್ತಲೇ ಇದೆ. ಮೈಸೂರು ದಸರಾಕ್ಕೆ ಅರಮನೆ ಮೆರಗು ನೀಡಿದರೆ ಮಂಗಳೂರು ದಸರಾಕ್ಕೆ ಕುದ್ರೋಳಿ ಗೋಕರ್ಣನಾಥ ದೇವಾಲಯದ್ದೇ ದರ್ಬಾರು. ಮೈಸೂರಲ್ಲಿ ಚಾಮುಂಡೇಶ್ವರಿ ಅಗ್ರದೇವತೆಯಾದರೆ, ಮಂಗಳೂರು ದಸರಾಕ್ಕೆ ಶಾರದೆ ಮಾತೆಯೊ0ದಿಗೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರೇ ಧರೆಗಿಳಿದು ಬಂದಿದ್ದಾರೆ.

    ಇದು ದೂರದ ಮೈಸೂರು ದಸರಾದ ಮೆರಗನ್ನು ನಾಡಿನ ಜನರಿಗೆ ಮಂಗಳೂರಿನಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಶಾರದ ಮಾತೆಯೊ0ದಿಗೆ ಶಕ್ತಿಯ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಶ್ಮಾಂಡಿನಿ, ಸ್ಕಂದಮಾತ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಹಾಗೂ ವಿಘ್ನನಿವಾರಕ ಗಣೇಶನನ್ನು ಇಲ್ಲಿ ಪ್ರತಿಷ್ಟಾಪಿಸಿ ವೈಭವಯುತವಾಗಿ 9 ದಿನಗಳ ಕಾಲ ಆರಾಧಿಸಲ್ಪಡುತ್ತಿರುವುದು ಇಲ್ಲಿನ ವೈಶಿಷ್ಟ್ಯ.

    ಕಳೆದ 27 ವರ್ಷಗಳಿಂದ ಇಲ್ಲಿ ಅದ್ದೂರಿಯಾಗಿ ದಸರಾ ಉತ್ಸವ ನೆರವೇರಿಸಲಾಗುತ್ತಿದೆ. ಇಲ್ಲಿ ನವದುರ್ಗೆಯರನ್ನು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿ ಏಕ ಕಾಲದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಅದ್ದೂರಿಯಾಗಿ ಜರಗುವ ಈ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಭಕ್ತರು ಇಲ್ಲಿ ಬರುತ್ತಾರೆ.

    ಒಂದೆಡೆ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬು ಸವಾರಿ ನಡೆದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ನವದುರ್ಗೆಯರ ಭವ್ಯ ಸವಾರಿ ಜರುಗುತ್ತದೆ. 10 ದಿನಗಳ ಕಾಲ ನಡೆದ ಮಂಗಳೂರು ದಸರಾ ಉತ್ಸವಕ್ಕೆ ಭವ್ಯ ಮೆರವಣಿಗೆಯ ನಂತರ ತೆರೆಬೀಳುತ್ತದೆ.

    ಮಂಗಳೂರಿನಲ್ಲಿ ನಡೆಯುವ ಈ ವಿಜೃಂಭಣೆಯ ದಸರಾ ಉತ್ಸವದಲ್ಲಿ ದೇಶ ವಿದೇಶಗಳಿಂದ ಬಂದು ಲಕ್ಷಾಂತರ ಜನರು ಭಾಗವಹಿಸುತ್ತಾರೆ. ನವದುರ್ಗೆಯರ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ. ಈ ವಿಜೃಂಭಣೆಯ ಶೋಭಾಯಾತ್ರೆ ಸರಿಸುಮಾರು 9 ಕಿ.ಮೀ ಸಂಚರಿಸುತ್ತದೆ. ಬಣ್ಣ ಬಣ್ಣದ ಮಿನುಗು ದೀಪಗಳಿಂದ ಅಲಂಕ್ರತ ಗೊಂಡ ಈ ಪ್ರಮುಖ ಬೀದಿಯಲ್ಲಿ ಶೋಭಾಯಾತ್ರೆಯನ್ನು ನೊಡುವುದೇ ಕಣ್ಣಿಗೆ ಹಬ್ಬ.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *