Connect with us

  LATEST NEWS

  ಹಿಂದೂ ಸಮಾಜದ ಹೋರಾಟ, ಬಿಜೆಪಿಯ ಪ್ರಯತ್ನದಿಂದ ಲೇಡಿಹಿಲ್‌ನಲ್ಲಿ ನಾರಾಯಣ ಗುರು ವೃತ್ತ ನಿರ್ಮಾಣವಾಗಿದೆ -ಸತೀಶ್ ಕುಂಪಲ

  ಉಳ್ಳಾಲ ಎಪ್ರಿಲ್ 19 : ಹಿಂದೂ ಸಂಘಟನೆ ಹಾಗೂ ಬಿಜೆಪಿ ಹೋರಾಟದ ಪ್ರಯತ್ನದಿಂದಾಗಿ ಲೇಡಿಹಿಲ್ ನಲ್ಲಿ ನಾರಾಯಣ ಗುರುಗಳ ವೃತ್ತ ನಿರ್ಮಾಣವಾಗಿದ್ದು. ಆದರೆ, ಇಂದು ಕೆಲವರು ನಾರಾಯಣ ಗುರುಗಳ ವೃತ್ತ ನಾವೇ ಮಾಡಿದ್ದು ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.


  ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ಕೊಲ್ಯದ ನಾರಾಯಣ ಗುರು ಮಂದಿರದಲ್ಲಿ ನಡೆದ ಹಿಂದುಳಿದ ವರ್ಗಗಳ ಸಾಮಾಜಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಬಜರಂಗದಳ, ವಿಶ್ವಹಿಂದೂ ಪರಿಷತ್‌, ಸಂಸದರು, ಶಾಸಕರು, ಮೇಯರ್, ಮುಡಾ ಅಧ್ಯಕ್ಷರು ಸೇರಿದಂತೆ ಹಿಂದೂ ಸಮಾಜದ ಆಶಯದಂತೆ ಅಂದಿನ ರಾಜ್ಯ ಸರ್ಕಾರ ನಾರಾಯಣಗುರುಗಳ ವೃತ್ತ ನಿರ್ಮಿಸಿದೆ.

  ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವಿಚಾರದಲ್ಲಿ ರಾಜಕೀಯ ಮಾಡುವವರು ಸಿದ್ಧರಾಮಯ್ಯ ಅವರನ್ನು ಕರೆಸಿ ಗುರುಗಳಿಗೆ ಮಾಲಾರ್ಪಣೆ ಮಾಡಿಸಲಿ. ಲೇಡಿಹಿಲ್‌ನಲ್ಲಿ ನಾರಾಯಣ ಗುರು ವೃತ್ತವಾಗಿಸಲು ಸಾರ್ವಜನಿಕವಾಗಿ ಅರ್ಜಿಗಳನ್ನ ಸಲ್ಲಿಸಲಾಗಿತ್ತು. ಹಿಂದೂ ಸಮಾಜದ ಹೋರಾಟ, ಬಿಜೆಪಿಯ ಪ್ರಯತ್ನದಿಂದ ವೃತ್ತ ನಿರ್ಮಾಣವಾಗಿದೆ. ಆದರೆ, ಇಂದು ಕೆಲವರು ನಾರಾಯಣ ಗುರುಗಳ ವೃತ್ತ ನಾವೇ ಮಾಡಿದ್ದು ಎಂದು ಹೇಳಿಕೊಳ್ಳುವುದು ಸರಿಯಲ್ಲ. ಬಿಜೆಪಿ ಮತ್ತು ಪಕ್ಷದ ನೇತೃತ್ವ ವಹಿಸಿದ ನಾಯಕರಿಗೆ ಇದನ್ನೆಲ್ಲ ಎದುರಿಸುವ ಶಕ್ತಿ ಇದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply