Connect with us

DAKSHINA KANNADA

ಮಂಜುನಾಥನ ಸನ್ನಿಧಿಯಲ್ಲಿ ನಂದಗೋಕುಲ

Share Information

ಮಂಗಳೂರು, ಸೆಪ್ಟೆಂಬರ್ 13 : ಮಂಗಳೂರಿನ ಕದ್ರಿ ದೇವಾಳದ ವಠಾರದಲ್ಲಿ ನಂದಗೋಕುಲವೇ ಧರೆಗಿಳಿದಿತ್ತು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಿಸಿಕೊಂಡು ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಭಾಗವಹಿಸುವ ಮೂಲಕ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ನಂದಗೋಕುಲವನ್ನೇ ಸೃಷ್ಠಿಸಿದ್ದರು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಕಳೆದ ಮೂರು ದಶಕಗಳಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ವಯೋಮಾನದವರಿಗಾಗಿ ರಾಷ್ಟ್ರಮಟ್ಟದ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತಿದೆ.

ಈ ಬಾರಿ 28 ವಿಭಾಗಗಳಲ್ಲಿ 8 ವೇದಿಕೆಯಲ್ಲಿ ಸ್ಪರ್ಧೆಗಳು ನಡೆದಿದೆ. ಕದ್ರಿಮಂಜುನಾಥೇಶ್ವರ ದೇವಾಲಯದ ಆವರಣದಲ್ಲಿ ನಡೆದ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೇವಲ ದಕ್ಷಿಣಕನ್ನಡ ಜಿಲ್ಲೆಯ ಜನ ಮಾತ್ರವಲ್ಲದೇ ಇತರ ರಾಜ್ಯದ ಜನರು ತಮ್ಮ ಚಿಣ್ಣರೊಂದಿಗೆ ಪಾಲ್ಗೊಳ್ಳುತ್ತಾರೆ. ಜಾತಿ, ಧರ್ಮ, ಕುಲ ಗೊತ್ರಗಳ ಎಲ್ಲೆಯನ್ನು ಮೀರಿ ಸಾವಿರಾರು ಜನರು ಈ ಉತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. 28 ವಿಭಾಗಗಳಲ್ಲಿಈ ಸ್ಪರ್ಧೆಯನ್ನು ಇಲ್ಲಿ ಆಯೋಜಿಸಲಾಗಿತ್ತು. ವಯೋಮಾನಕ್ಕೆ ತಕ್ಕಂತೆ ಇಲ್ಲಿ ಸ್ಪರ್ಧೆಯಿದ್ದು ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಯಕ್ಷಕೃಷ್ಣ, ರಾಧಾ ಕೃಷ್ಣ, ಯಶೋಧಾಕೃಷ್ಣ ಹೀಗೆ ಸ್ಪರ್ಧೆಗಳನ್ನು ವಿಭಾಗಿಸಲಾಗಿತ್ತು.

ಈ ಭಾರಿ ಉತ್ಸವದಲ್ಲಿ 2000 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದೊಂದು ಸ್ಪರ್ಧೆ ಮಾತ್ರವಾಗಿರದೇ ಇಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಇಲ್ಲಿ ಬಹುಮಾನಗಳನ್ನು ನೀಡಲಾಗುತ್ತಿದ್ದು ಸ್ಪರ್ಧಾ ಮನೋಭಾವವನ್ನು ಬೆಳೆಸುವ ಆಶಯವೂ ಇದರದ್ದಾಗಿದೆ.ಸ್ಪರ್ಧೆಗಾಗಿ ಇಲ್ಲಿ ಮಕ್ಕಳು ಭಾಗವಹಿಸುವುದಕ್ಕೆ ಬದಲು ಈ ಸ್ಪರ್ಧೆಗೆ ಭಾವನಾತ್ಮಕವಾದ ಸಂಬಂಧಗಳನ್ನು ಜೋಡಿಸಲಾಗಿದೆ.

ಈ ಹಿಂದೆ ಈ ಸ್ಪರ್ಧೆಯಲ್ಲಿ ಮಕ್ಕಳು ಹಾಗೂ ಯುವತಿಯರು ಮದುವೆಯಾದ ಬಳಿಕ ತಮ್ಮ ಮಕ್ಕಳ ಜೊತೆಗೆ ಇಲ್ಲಿಗೆ ಆಗಮಿಸಿ ಅವರನ್ನು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅಣಿ ಮಾಡುವುದು ಈ ಸ್ಪರ್ಧೆಯ ವಿಶೇಷವೂ ಹೌದು.


Share Information
Advertisement
Click to comment

You must be logged in to post a comment Login

Leave a Reply