FILM
ಶ್ರೀರಾಮನ ವಿರುದ್ದ ಅವಹೇಳನ- ಓಟಿಟಿಯಿಂದ ನಯನತಾರಾ ಸಿನೆಮಾ ಅನ್ನಪೂರ್ಣಿಗೆ ಗೇಟ್ ಪಾಸ್
ಹೊಸದಿಲ್ಲಿ ಜನವರಿ 11 : ಇತ್ತೀಚೆಗಷ್ಟೇ ಬಿಡುಗಡೆಯಾದ ಲೇಡಿ ಸುಪರ್ ಸ್ಟಾರ್ ನಯನತಾರಾ ಅವರ ಅನ್ನಪೂರ್ಣಿ ಸಿನೆಮಾ ವಿವಾದಕ್ಕೆ ಕಾರಣವಾಗಿದೆ. ಸಿನೆಮಾದ ದೃಶ್ಯವೊಂದರಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಸಂಭಾಷಣೆಗಳನ್ನು ಹಾಕಲಾಗಿದ್ದು ಇದರ ವಿರುದ್ದ ಭಾರೀ ಅಕ್ರೋಶ ವ್ಯಕ್ತವಾಗಿತ್ತು.
ಇದೀಗ ಭಾರೀ ವಿವಾದವಾಗುತ್ತಿರುವ ಬೆನ್ನಲ್ಲೇ ನೆಟ್‌ಫ್ಲಿಕ್ಸ್ ನಯನತಾರಾ ಅಭಿನಯದ ‘ಅನ್ನಪೂರ್ಣಿ’ ಚಿತ್ರವನ್ನು ತೆಗೆದುಹಾಕಿದೆ. ಚಿತ್ರದ ನಿರ್ಮಾಣ ಸಂಸ್ಥೆ ZEE5 ಕೂಡ ವಿಶ್ವ ಹಿಂದೂ ಪರಿಷತ್ (ವಿಹಿಂಪ)ಗೆ ಕ್ಷಮೆಯನ್ನು ಕೋರಿ ಪತ್ರವನ್ನು ಬರೆದಿದೆ.
‘ಸಹ ನಿರ್ಮಾಪಕರಾಗಿ ಹಿಂದೂ ಮತ್ತು ಬ್ರಾಹ್ಮಣ ಸಮುದಾಯಗಳ ಬಗ್ಗೆ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ ಮತ್ತು ಆಯಾ ಸಮುದಾಯಗಳಿಗೆ ಉಂಟಾದ ಅನಾನುಕೂಲತೆ ಮತ್ತು ನೋವಿಗೆ ನಾವು ಈ ಮೂಲಕ ಕ್ಷಮೆಯನ್ನು ಕೋರುತ್ತೇವೆ’ ಎಂದು ZEE5 ಪತ್ರದಲ್ಲಿ ಹೇಳಿದೆ.
‘ಮರುಸಂಕಲನ ಮಾಡುವವರೆಗೆ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಿಂದ ತೆಗೆಯಲು ಸಹ ನಿರ್ಮಾಪಕರಾದ ಟ್ರೈಡಂಟ್ ಆರ್ಟ್ಸ್ ಜೊತೆಗೆ ನಾವು ಕಾರ್ಯಾಚರಿಸುತ್ತಿದ್ದೇವೆ’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
Reason why #Annapoorani removed from Netflix pic.twitter.com/7lOEZn046o
— Raja_cinemaholic (@raja_nagamuthu) January 11, 2024