Connect with us

DAKSHINA KANNADA

ನಳಿನ್ ಕುಮಾರ್ ಕಾರನ್ನು ಪಂಚರ್ ಮಾಡೋದಲ್ಲ, ಆತನ ತಲೆ ಒಡೆಯಬೇಕಿತ್ತು: ಮಹೇಶ್ ಶೆಟ್ಟಿ ತಿಮರೋಡಿ

ಪುತ್ತೂರು, ಜುಲೈ 29: ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ರಾಜ್ಯ ಸರಕಾರದ ವೈಫಲ್ಯದಿಂದ ಈ ಹತ್ಯೆ ನಡೆದಿದೆ. ಹಿಂದೂ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಹಿಂದುಗಳನ್ನು ಕಡೆಗಣಿಸುತ್ತಿದೆ. ಹಿಂದುತ್ವಕ್ಕಾಗಿ ಹೋರಾಡಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ, ನಳಿನ್ ಕುಮಾರ್ ಕಾರನ್ನು ಪಂಚರ್ ಮಾಡೋದಲ್ಲ, ಆತನ ತಲೆ ಒಡೆಯಬೇಕಿತ್ತು. ಆಗ ಅಂತವರಿಗೆ ಬುದ್ಧಿ ಬರುತ್ತೆ, ಚುನಾವಣೆ ಬರುವಾಗ ಇಂಥ ಹತ್ಯೆಗಳನ್ನು ನಡೆಸೋದು ರಾಜಕೀಯ ಪಕ್ಷಗಳ ತಂತ್ರ

ಹಿಜಾಬ್ ವಿವಾದ ಆರಂಭವಾದಾಗಲೇ ಒಂದು ಕೊಲೆ ಆಗುತ್ತೆ ಎಂದಿದ್ದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆ ಆಯಿತು, ಇದೀಗ ಪ್ರವೀಣ್ ಕೊಲೆ ಆಗಿದೆ. ಮುಖ್ಯಮಂತ್ರಿಗಳ ಬಳಿ ಇರುವ ಗುಪ್ತಚರ ಇಲಾಖೆ ಏನು ಮಾಡ್ತಾ ಇದೆ, ಬೆಳ್ತಂಗಡಿಯಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಕೊಲೆಗೆ ನ್ಯಾಯ ಸಿಕ್ಕಿಲ್ಲ, ಸಂದೇಹ ಇರುವವರನ್ನೇ ರಾಜ್ಯಸಭೆಯ ಎಂ.ಪಿ ಮಾಡಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply