LATEST NEWS
ಸಿದ್ದರಾಮಯ್ಯನವರೇ ತಾಲಿಬಾನ್ ಸಂಸ್ಕೃತಿ ಹೊಂದಿದ್ದು ಅವರೇ ದೊಡ್ಡ ಭಯೋತ್ಪಾದಕ: ನಳಿನ್ ಕುಮಾರ್ ಕಟೀಲು
ಮಂಗಳೂರು ಸೆಪ್ಟೆಂಬರ್ 29: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ತಾಲಿಬಾನ್ ಸಂಸ್ಕೃತಿ ಹೊಂದಿದವರು, ಅವರು ಸಿಎಂ ಆಗಿದ್ದಾಗಲೇ 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿತ್ತು, ಅವರ ಆಳ್ವಿಕೆ ಕಾಲದಲ್ಲಿಯೇ, ಕಾಂಗ್ರೆಸ್ ಆಡಳಿತದಲ್ಲಿಯೇ ರಾಜ್ಯದಲ್ಲಿ ಹೆಚ್ಚು ಕೊಲೆ, ಸುಲಿಗೆ, ಮರಣ, ನಿತ್ಯ ಗೋಹತ್ಯೆ ನಡೆಯುತ್ತಿತ್ತು ಎಂದು ಟೀಕಿಸಿದ್ದಾರೆ. ಅವರೊಬ್ಬ ದೊಡ್ಡ ಭಯೋತ್ಪಾದಕ ರೀತಿ ಅನಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಇವತ್ತು ಅತಂತ್ರ ಸ್ಥಿತಿಯಲ್ಲಿದೆ. ಅವರಿಗೆ ಅತಂತ್ರ ಸ್ಥಿತಿ ಬಂದಾಗ ಬಿಜೆಪಿ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ದಕ್ಷಿಣ ಕನ್ನಡ ಒಂದೇ ಜಿಲ್ಲೆಯನ್ನು ತೆಗೆದುಕೊಂಡು ನೋಡಿದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಶರತ್ ಮಡಿವಾಳ, ದೀಪಕ್ ರಾವ್ , ಪ್ರತಾಪ್ ಪೂಜಾರಿ ಹೀಗೆ ಹಲವು ಹಿಂದೂ ಮುಖಂಡರು, ಕಾರ್ಯಕರ್ತರ ಹತ್ಯೆಯಾಗಿದೆ. ಸುಳ್ಯದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲ್ಲಲಾಗಿತ್ತು, ಎಟಿಎಂ ಒಳಗೆ ಹೋದ ಮಹಿಳೆ ಮೇಲೆ ಬರ್ಭರವಾಗಿ ಹಲ್ಲೆಯಾಗಿತ್ತು, ಇದಕ್ಕೆ ನಾನು ಹೇಳಿದ್ದು ಅವರದ್ದೇ ತಾಲಿಬಾನ್ ಸಂಸ್ಕೃತಿ ಎಂದು ಟೀಕಿಸಿದರು.