DAKSHINA KANNADA
ತುಳುನಾಡಿನಲ್ಲಿ ನಾಗರ ಪಂಚಮಿಯ ಸಂಭ್ರಮ,ಕುಕ್ಕೆ ಸುಬ್ರಹ್ಮಣ್ಯ,ಕುಡುಪು ಅನಂತ ಪದ್ಮನಾಭ ಕ್ಷೇತ್ರದಲ್ಲಿ ಭಕ್ತರ ದಂಡು..!
ಇಂದು ನಾಗರ ಪಂಚಮಿ. ತುಳು ನಾಡಿನ ಈ ಪುಣ್ಯ ಭೂಮಿಯಲ್ಲಿ ನಾಗರಾಧನೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ದೇವಸ್ಥಾನಗಳಲ್ಲಿ ,ಕುಟುಂಬದ ನಾಗಬನದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಮಂಗಳೂರು : ಇಂದು ನಾಗರ ಪಂಚಮಿ. ತುಳು ನಾಡಿನ ಈ ಪುಣ್ಯ ಭೂಮಿಯಲ್ಲಿ ನಾಗರಾಧನೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ದೇವಸ್ಥಾನಗಳಲ್ಲಿ ,ಕುಟುಂಬದ ನಾಗಬನದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತ ಸಾಗರವೇ ಹರಿದು ಬರುತ್ತದೆ.
ನಾಗ ದೇವನಿಗೆ ನಾಗದೇವರ ಕಲ್ಲಿನ ಮೂರ್ತಿಗೆ ಹಾಲಿನ ಅಭಿಷೇಕ, ಸೀಯಾಳಾಭಿಷೇಕ ಮಾಡಲಾಗುತ್ತದೆ,
ಸಂತಾನ ಪ್ರಾಪ್ತಿ ,ನಾಗ ದೋಷ ನಿವಾರಣೆ ಸಹಿತ ಅನೇಕ ಸಮಸ್ಯೆಗಳಿಗೆ ಪರಿಹಾರ್ಥವಾಗಿ ಮತ್ತು ಹರಕೆಗಳ ತೀರುಸುವಿಕೆಯಂತಹ ವಿಶೇಷ ಸೇವೆಗಳು ನಡೆಯುತ್ತಿವೆ.
ಇದರ ಜೊತೆಗೆ ತುಳುನಾಡಿನಲ್ಲಿ ನಾಗರ ಪಂಚಮಿಯಂದು ವಿಶೇಷವಾಗಿ ನಾಗ ದೇವರಿಗೆ ತನು ತಂಬಿಲ ಅರ್ಪಿಸುವ ಆಚರಣೆಯಿದೆ.
ಅಳಿಯ ಕಟ್ಟು ಸಂಪ್ರದಾಯ ಪಾಲಿಸುವ ತುಳುನಾಡಿನ ಅನೇಕ ಕುಟುಂಬಗಳು ತಮ್ಮ ಕುಟುಂಬದ ಮನೆಯ ನಾಗ ಬನದಲ್ಲಿ ನಾಗ ದೇವರ ಕಲ್ಲಿಗೆ ಹಾಲಿನ ಅಭಿಷೇಕ, ಸಿಯಾಳಭಿಷೇಕ ಹಾಗೂ ಹಿಂಗಾರವನ್ನ ಅರ್ಪಿಸಿ ಪುನೀತರಾಗುತ್ತಿದ್ದಾರೆ.
ಜಾತಿ ಧರ್ಮ ಭೇದವನ್ನ ಮರೆತು ಸಾವಿರಾರು ಜನರು ನಾಗರ ಪಂಚಮಿಯ ಈ ಸಂಭ್ರಮದಲ್ಲಿ ಭಾಗವಹಿಸಿ ಒಳಿತಿಗಾಗಿ ಪ್ರಾರ್ಥಿಸುತ್ತಾರೆ.
ಮಂಜೇಶ್ವರದಲ್ಲಿ ನಗರ ಪಂಚಮಿ ಸಂಭ್ರಮ ಹದಿನೆಂಟು ಪೇಟೆಯ ದೇವಳ ವೆಂಬ ಖ್ಯಾತಿಯ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ” ನಾಗರ ಪಂಚಮಿ” ಪ್ರಯುಕ್ತ ಇಂದು ಸಹಸ್ರಾರು ಭಜಕರು ರೊಡಗೂಡಿ ಶ್ರದ್ದಾ ಭಕ್ತಿಯಿಂದ ಶ್ರೀ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು .
ಶ್ರೀದೇವಳ ದಲ್ಲಿ ಪ್ರಾತಃಕಾಲದಿಂದ ಸಾಗರೋಪ ಸಾಗರ ಭಗವತ್ ಭಕ್ತರು ನಾಗರ ಪಂಚಮಿ ಪ್ರಯುಕ್ತ ಶ್ರೀ ದೇವರಿಗೆ ವಾಸುಕೀ ಪೂಜೆ , ನಾಗ ಪೂಜೆ , ಪಂಚಾಮೃತ ಅಭಿಷೇಕ , ಕ್ಷೀರಾಭಿಷೇಕ , ಶಿಯಾಲ ಅಭಿಷೇಕಗಳು ನಡೆದವು .
ದೇಶ ವಿದೇಶಗಳಿಂದ ಭಜಕರು ಆಗಮಿಸಿದ್ದು , ಶ್ರೀ ದೇವಳದಲ್ಲಿ ಇಂದು ವಿಶೇಷ ಅಲಂಕಾರ , ಪೂಜೆ ಪುರಸ್ಕಾರಗಳು ನಡೆದವು , ಮಧ್ಯಾನಃ ಪೂಜೇಬಳಿಕ ಸಮಾರಾಧನೆ ನೆರವೇರಿತು .