Connect with us

    FILM

    ನಾನು ಹಿಟ್ ಆಂಡ್ ರನ್ ಮಾಡಿಲ್ಲ – ಇದು ಆಕಸ್ಮಿಕವಾಗಿ ಆದ ಅಪಘಾತ -ಕಣ್ಣೀರಿಟ್ಟ ನಟ ನಾಗಭೂಷಣ

    ಬೆಂಗಳೂರು ಅಕ್ಟೋಬರ್ 09 : ನಾನು ಯಾವುದೇ ಹಿಟ್ ಅಂಡ್ ರನ್ ಮಾಡಿಲ್ಲ, ಇದು ಆಕಸ್ಮಿಕವಾಗಿ ಆದ ಅಅಘಾತ ಇದರಿಂದಾಗಿ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆನೆ ಎಂದು ನಟ ನಾಗಭೂಷಣ ತಿಳಿಸಿದ್ದಾರೆ.


    ಮಾಧ್ಯಮಗಳೊಂದಿಗೆ ಮಾತನಾಡಿದ ಅರವರು ರಾಜರಾಜೇಶ್ವರಿ ನಗರ ಕಡೆಯಿಂದ ಕೋಣನಕುಂಟೆ ಕ್ರಾಸ್‌ ಕಡೆಗೆ ಹೋಗಬೇಕಾದರೆ ಈ ಘಟನೆ ನಡೆದಿತ್ತು. ಹಲವರು ಇದು ಹಿಟ್‌ ಆ್ಯಂಡ್‌ ರನ್‌ ಎಂಬ ಆರೋಪ ಮಾಡುತ್ತಿದ್ದಾರೆ. ಅಪಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಉದ್ದೇಶದಿಂದ ಸ್ವಲ್ಪ ಕಿತ್ತು ಬಂದಿದ್ದ ಬಂಪರ್‌ ಅನ್ನು ನಾನು ಪೂರ್ಣವಾಗಿ ಕಿತ್ತೆಸೆದೆ. ಅವರನ್ನು ಆಸ್ಪತ್ರೆಗೆ ನಾನೇ ಸೇರಿಸಿದೆ. ಕರೆದೊಯ್ಯುವಾಗಲೇ ನಾನು ಪೊಲೀಸರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದೆ. ಮಹಿಳೆ ಮೃತಪಟ್ಟ ವಿಷಯವನ್ನು ಕೇಳಿದ ಸಂದರ್ಭದಲ್ಲೇ ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರ ಮುಂದೆಯೇ ಪೊಲೀಸರು ನಾನು ಕುಡಿದಿದ್ದೇನೆಯೇ ಎಂದು ಪರೀಕ್ಷೆ ಮಾಡಿಸಿದ್ದರು. ಅದರಲ್ಲಿ ನಾನು ಕುಡಿದಿಲ್ಲ ಎಂದು ದಾಖಲಾಗಿತ್ತು. ನಂತರ ಪೊಲೀಸರ ಸೂಚನೆಯಂತೆ ರಕ್ತ ಪರೀಕ್ಷೆಯನ್ನೂ ಮಾಡಿಸಿದೆ ಎನ್ನುತ್ತಾ ನಾಗಭೂಷಣ್‌ ಗದ್ಗದಿತರಾದರು.


    ‘ನಾನು ಆ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿದೆ. ಓಡಿಹೋಗಲಿಲ್ಲ. ಆ ಎರಡು ಜೀವಗಳನ್ನೂ ಉಳಿಸಬೇಕು ಎನ್ನುವುದೇ ಉದ್ದೇಶವಾಗಿತ್ತು. ನನಗೆ ಆ ನೋವು ಕಾಡುತ್ತಿದೆ. ನನಗಿಂತ ಹೆಚ್ಚು ನೋವು ಅವರಿಗಿದೆ ಎಂಬ ಅರಿವೂ ಇದೆ. ನಾನು ಚಿಕ್ಕವಯಸ್ಸಿನಲ್ಲಿಯೇ ಗೌರಿ ಹಬ್ಬದ ದಿನ ಅಪಘಾತವೊಂದರಲ್ಲಿ ತಂದೆಯನ್ನು ಕಳೆದುಕೊಂಡಿದ್ದೆ. ಅಪಘಾತ ಮಾಡಿದವರು ಯಾರು ಎಂದು ನಮಗೆ ಇನ್ನೂ ತಿಳಿದಿಲ್ಲ. ನಾನು ಎಲ್ಲರನ್ನೂ ನಗಿಸಲು ಇಚ್ಛಿಸುವವನು. ದುಃಖ ಕೊಡಲು ನನಗೆ ಮನಸ್ಸಿಲ್ಲ. ದಯವಿಟ್ಟು ಹಿಟ್‌ ಆ್ಯಂಡ್‌ ರನ್‌ ಎಂದು ಹೇಳಬೇಡಿ’ ಎಂದು ವಿನಂತಿಸಿಕೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply