Connect with us

  DAKSHINA KANNADA

  ಇಸ್ರೇಲ್‌-ಹಮಾಸ್ ಕದನ : ಕನ್ನಡಿಗರಿಗಾಗಿ ಪ್ರತ್ಯೇಕ ಹೆಲ್ಪ್‌ ಲೈನ್‌ ಆರಂಭಿಸಿದ ರಾಜ್ಯ ಸರ್ಕಾರ..!

  ಇಸ್ರೇಲ್‌ ನಲ್ಲಿ 12 ಕ್ಕೂ ಅಧಿಕ ಜನ ಕರ್ನಾಟಕದವರಿದ್ದು  ಅವರ ನೆರವಿದೆ ರಾಜ್ಯ ಸರ್ಕಾರ ಧಾವಿಸಿದ್ದು ಪ್ರತ್ಯೇಕ ಹೆಲ್ಪ್‌ ಲೈನ್‌ ಆರಂಭಿಸಿದೆ.

  ಬೆಂಗಳೂರು: ಇಸ್ರೇಲ್‌ – ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಕದನ 2 ನೇ ದಿನಕ್ಕೆ ಕಾಲಿರಿಸಿದ್ದು ಭೀಕರ ಸ್ವರೂಪ ಪಡೆದುಕೊಂಡಿದೆ.

  ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿದ್ದು, 48 ಗಂಟೆ ಅವಧಿಯಲ್ಲಿ 1000 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

  ಈ ಪೈಕಿ ಇಸ್ರೇಲ್‌ ಪ್ರಜೆಗಳ ಸಂಖ್ಯೆಯೇ 600ಕ್ಕೂ ಅಧಿಕವಿದೆ ಎಂದು ಹೇಳಲಾಗಿದೆ.

  ಎರಡು ಕಡೆಯ ದಾಳಿ ಪ್ರತಿ ದಾಳಿಯಿಂದಾಗಿ ಗಾಜಾ ಪಟ್ಟಿ ಅಕ್ಷರಶಃ ರಣರಂಗದಂತಾಗಿದೆ.

  ಇಸ್ರೇಲ್‌ನಲ್ಲಿ 12 ಕ್ಕೂ ಅಧಿಕ ಜನ ಕರ್ನಾಟಕದವರಿದ್ದು  ಅವರ ನೆರವಿದೆ ರಾಜ್ಯ ಸರ್ಕಾರ ಧಾವಿಸಿದ್ದು ಪ್ರತ್ಯೇಕ ಹೆಲ್ಪ್‌ ಲೈನ್‌ ಆರಂಭಿಸಿದೆ.

  ಯಾವುದೇ ರೀತಿಯ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ 080 22340676, 080 22253707 ಸಂಪರ್ಕಿಸಬಹುದು.

  ಅದೇ ರೀತಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ +97235226748 ಸಂಖ್ಯೆಗೆ ಕರೆ ಮಾಡಬಹುದು ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

  ‘ಸದ್ಯದ ಪರಿಸ್ಥಿತಿ ಬಹಳ ಕಳವಳಕಾರಿಯಾಗಿದೆ. ಅಲ್ಲಿ ನೆಲೆಸಿರುವ ರಾಜ್ಯದ ನಾಗರಿಕರ ರಕ್ಷಣೆಗಾಗಿ ನಾವು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ನಿಕಟ ಸಂಪರ್ಕದಲ್ಲಿದ್ದೇವೆ.

  ಸ್ಥಳೀಯು ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕು.ಅನಗತ್ಯ ಪ್ರಯಾಣ ತಪ್ಪಿಸಿ, ಸುರಕ್ಷತಾ ಆಶ್ರಯಗಳಲ್ಲಿ ನೆಲೆ ಪಡೆಯಲು ವಿನಂತಿಸಲಾಗಿದೆ’ ಎಂದು ಸಿಎಂ ತಿಳಿಸಿದ್ದಾರೆ.

   

  ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ 080 22340676, 080 22253707

  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯವಾಣಿ +97235226748

   

  Share Information
  Advertisement
  Click to comment

  You must be logged in to post a comment Login

  Leave a Reply