Connect with us

KARNATAKA

Mysuru : ನರ ಹಂತಕ ಹುಲಿ ದಾಳಿಗೆ ಮತ್ತೋರ್ವ ಬಲಿ..!

ಮೈಸೂರು ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ನರ ಹಂತಕ ಹುಲಿ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ  ಹುಲಿ ದಾಳಿ ಮಾಡಿ ವ್ಯಕ್ತಿಯನ್ನು ಕೊಂದಿದೆ.

ಮೈಸೂರು:  ಕಾಡಂಚಿನ ಗ್ರಾಮಗಳಲ್ಲಿ  ಮಾನವ – ವನ್ಯಜೀವಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿದ್ದು ಸಾಕು ಪ್ರಾಣಿಗಳ ದಾಳಿ ಮಾಡುತ್ತಿದ್ದ ವನ್ಯಜೀವಿಗಳು ಇದೀಗ ಮಾನವನ ಮೇಲೆ ದಾಳಿ ಆರಂಭಿಸಿದೆ.

ಮೈಸೂರು ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ನರ ಹಂತಕ ಹುಲಿ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ  ಹುಲಿ ದಾಳಿ ಮಾಡಿ ವ್ಯಕ್ತಿಯನ್ನು ಕೊಂದಿದೆ. ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(45) ಹುಲಿ ದಾಳಿಗೆ ಬಲಿಯಾದ ರೈತನಾಗಿದ್ದಾನೆ. ಟೀ ಕುಡಿದು ಶುಂಠಿ ಹೊಲಕ್ಕೆ ಬಾಲಾಜಿ ನಾಯ್ಕ ತೆರಳಿದ್ದರು. ಈ ವೇಳೆ ಏಕಾಏಕಿ ಹುಲಿ ದಾಳಿ ಮಾಡಿ ಎಳೆದೊಯ್ದಿದೆ.  ಹುಲಿ ಬಾಲಾಜಿ ನಾಯ್ಕನನ್ನು ಎಳೆದೊಯ್ಯಿತ್ತಿರುವುದು ಸ್ಥಳೀಯರು ಗಮನಿಸಿ ಕೂಗಾಡಿದ್ದಾರೆ. ಈ ಸಂದರ್ಭ ಹುಲಿ ಅಲ್ಲಿಂದ ಪರಾರಿಯಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇತ್ತೇಚೆಗೆ  ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದ ದನಗಾಹಿ ಮೇಲೆ ಹುಲಿ ದಾಳಿ ಮಾಡಿತ್ತು. ಹೀಗಾಗಿ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು.ಹುಲಿ ಕಾರ್ಯಾಚರಣೆಗೆ  ಸಾಕಾನೆಗಳನ್ನು ಕರೆಸಿದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply