LATEST NEWS
ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ಭೀಕರ ಭೂಕಂಪ – ಧರೆಗುರುಳಿದ ಕಟ್ಟಡಗಳು – 20 ಕ್ಕೂ ಅಧಿಕ ಮಂದಿ ಸಾವು

ಮ್ಯಾನ್ಮಾರ್ ಮಾರ್ಚ್ 28: ಮ್ಯಾನ್ಮಾರ್ ಮತ್ತು ಥೈಲಾಂಡ್ ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಮ್ಯಾನ್ಮಾರ್ ಕೇಂದ್ರಬಿಂದುವಾಗಿ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಿಂದ 10 ಕಿ.ಮೀ ದೂರ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದು 43 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ. ಬಲವಾದ ಭೂಕಂಪದಿಂದ ನಗರವು ನಲುಗಿಹೋಗಿದೆ.
ಮಧ್ಯ ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರ ನಂತರ 6.8 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಸಗೈಂಗ್ ನಗರದ ವಾಯುವ್ಯಕ್ಕೆ 16 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಮತ್ತು ಅಕ್ಷಾಂಶ 21.93 ಉತ್ತರ ಮತ್ತು ರೇಖಾಂಶ 96.07ರಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಲ್ಲಿ ಕಟ್ಟಡಗಳಿಂದ ಛಾವಣಿಗಳು ಬಿದ್ದು, ರಸ್ತೆಗಳು ಕುಸಿದುಹೋದವು. ಇದು 20 ಲೇನ್‌ಗಳ ಅಗಲದ ಹೆದ್ದಾರಿಗಳನ್ನು ಹೊಂದಿರುವ ವಿಸ್ತಾರವಾದ ನಗರವಾಗಿದೆ. ಸಮವಸ್ತ್ರ ಧರಿಸಿದ ಸಿಬ್ಬಂದಿ ಹೊರಗೆ ಓಡಿಹೋದಾಗ ಸೀಲಿಂಗ್‌ನಿಂದ ತುಂಡುಗಳು ಬಿದ್ದವು, ಗೋಡೆಗಳು ಬಿರುಕು ಬಿಟ್ಟವು, ಅವರಲ್ಲಿ ಕೆಲವರು ನಡುಗುತ್ತಾ ಕಣ್ಣೀರು ಸುರಿಸುತ್ತಿದ್ದರು, ತಮ್ಮ ಜನರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಭೂಕಂಪದ ನಂತರ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ ಆದರೆ ಅವು ಉತ್ತರ ಥೈಲ್ಯಾಂಡ್‌ನ ಹತ್ತಿರದ ನಗರಗಳಲ್ಲಿ ಮತ್ತು ರಾಜಧಾನಿ ಬ್ಯಾಂಕಾಕ್‌ವರೆಗೆ ಭೀತಿಯನ್ನುಂಟುಮಾಡಿದವು.
ಭೂಕಂಪದಿಂದ ಈವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಪ್ರಸ್ತುತ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಆದರೆ, ಭೂಕಂಪದ ನಂತರ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಗಗನ ಚುಂಬಿ ಕಟ್ಟಡಗಳು, ಮನೆಗಳು ನೆಲೆಕ್ಕುರುಳಿದ್ದು, ಭೀತಿಗೊಂಡ ಜನರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿವೆ. ಬೃಹತ್ ಕಟ್ಟವೊಂದು ಏಕಾಏಕಿ ನೆಲಕ್ಕುರುಳಿ ಬಿದ್ದಿದ್ದು, ಈ ದೃಶ್ಯ ಕೂಡ ಸೆರೆಯಾಗಿದೆ. ಬಹುಮಹಡಿ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಈಜುಕೊಳದಿಂದ ನೀರು ಕೆಳಕ್ಕೆ ಬೀಳುತ್ತಿರುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
1 Comment