Connect with us

    LATEST NEWS

    ನನ್ನ ತಲೆ ಕಡಿದವರಿಗೆ 10 ಲಕ್ಷ ಘೋಷಣೆ ಇದ್ದರೂ ಎಸ್ಕಾರ್ಟ್ ಭದ್ರತೆ ನೀಡದ ಪೊಲೀಸರು – ಪ್ರಮೋದ್ ಮುತಾಲಿಕ್

    ಉಡುಪಿ ಅಕ್ಟೋಬರ್ 06: ನನ್ನ ತಲೆ ಕಡಿದವರಿಗೆ 10 ಲಕ್ಷ ನೀಡುವುದಾಗಿ ಉಡುಪಿ ಜಿಲ್ಲೆಯಿಂದಲೇ ಕೊಲೆ ಬೆದರಿಕೆ ಬಂದರೂ ಕೂಡ ಜಿಲ್ಲೆಯ ಪೊಲೀಸರು 5 ದಿನ ನನಗೆ ಎಸ್ಕಾರ್ಟ್ ಭದ್ರತೆ ನೀಡಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ.


    ಈ ಬಗ್ಗೆ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಪ್ರವಾಸದ ಸಂದರ್ಭ ನನಗೆ ಪೋಲಿಸ್ ಎಸ್ಕಾರ್ಟ್ ಬೇಕಾಗಿತ್ತು, ಮತ್ತು ಅದನ್ನು ನೀಡುವುದು ಪೋಲಿಸ್ ಇಲಾಖೆಯ ಕರ್ತವ್ಯವಾಗಿತ್ತು,ಆದರೆ ಕೊಲೆ ಬೆದರಿಕೆ ಹಾಕಿದ ಜಿಲ್ಲೆಯಲ್ಲೇ ನನ್ನನ್ನು ನಿರ್ಲಕ್ಷ್ಯಿಸಿದ್ದಾರೆ ಎಂದರು. ಇದೊಂದು ರಾಜಕೀಯ ಕುತಂತ್ರಗಾರಿಕೆ ಎಂದು ಅನಿಸುತ್ತದೆ. ಈ ರೀತಿ ಮಾಡಿದರೆ ಜನರೇ ನಿಮಗೆ ಉಗಿಯುತ್ತಾರೆ. ಹಿಂದುತ್ವಕ್ಕಾಗಿ ಕೆಲಸ ಮಾಡಿದವರಿಗೆ ರಕ್ಷಣೆ ಕೊಟ್ಟಿಲ್ಲ ಅಂದರೆ ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅನ್ನೋದು ಗೊತ್ತಾಗುತ್ತದೆ.

    ನೀವು ನನಗೆ ತೊಂದರೆ ಕೊಡುವುದು ಬಿಟ್ಟು ಬೇರೆ ಯೋಚನೆ ಮಾಡಿ ಎಂದರು. ಈ ಕೆಲಸವನ್ನು ರಾಕ್ಷಸಿ ಪ್ರವೃತ್ತಿಯ ಕಾಂಗ್ರೇಸ್ ನವರು ಮಾಡುತ್ತಿದ್ದರು, ಇದೀಗ ನೀವು ಮಾಡುತ್ತಿದ್ದೀರಿ ಎಂದು ರಾಜ್ಯಸರಕಾರದ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ, ನೀವು ಹೀಗೆ ಮಾಡಿದರೆ ಹಿಂದುತ್ವಕ್ಕೆ ತೊಂದರೆಯಾಗುತ್ತದೆ, ನೀವು ತೊಂದರೆ ಕೊಟ್ಟಷ್ಟು ನಾನು ಮತ್ತೆ ಮತ್ತೆ ಪುಟಿದು ಎದ್ದು ಬರುತ್ತೇನೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *