Connect with us

    LATEST NEWS

    ನನ್ನ ಬಳಿ ಇರುವ ಗನ್ ಗೆ ಲೈಸೆನ್ಸ್ ಇದೆ- ಪ್ರಮೋದ್ ಮುತಾಲಿಕ್

    ಉಡುಪಿ ಅಕ್ಟೋಬರ್ 06: ಉಡುಪಿಯಲ್ಲಿ ಆಯುಧಪೂಜೆ ದಿನ ಪ್ರಮೋದ್ ಮುತಾಲಿಕ್ ಗನ್ ಇಟ್ಟು ಶಸ್ತ್ರ ಪೂಜೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ ಪ್ರತಿಕ್ರಿಯೆ ನೀಡಿದ್ದು, ನಾನು 15 ವರ್ಷದಿಂದ ಶಸ್ತ್ರಪೂಜೆ ಮಾಡುತ್ತಾ ಬಂದಿದ್ದೇನೆ, ನವರಾತ್ರಿ ಸಂದರ್ಭ ಶಸ್ತ್ರಪೂಜೆ ಮಾಡುವುದು ಪರಂಪರೆ, ಹಾಗಾಗಿ ನನ್ನಲ್ಲಿ ಇರುವ ಶಸ್ತ್ರವನ್ನಿಟ್ಟು ಪೂಜೆ ಮಾಡಿದ್ದೇನೆ, ನನ್ನ ಬಳಿ ಪರವಾನಿಗೆ ಇರುವ ಗನ್ ಇದ್ದು, ನಾನು ಯಾವುದೇ ಕಾನೂನುಬಾಹಿರ ಶಸ್ತ್ರಗಳನ್ನು ಇಟ್ಟಿಲ್ಲ, ಯಾರನ್ನೂ ಹೆದರಿಸಲು ನಾನು ಶಸ್ತ್ರ ಪೂಜೆ ಮಾಡಿದಲ್ಲ, ಸಂಪ್ರದಾಯದ ಹಿನ್ನಲೆಯಲ್ಲಿ ಪೂಜೆ ಮಾಡಿದ್ದೇನೆ ಎಂದರು.


    ಶಸ್ತ್ರ ಪೂಜೆ ಮಾಡದೇ ಇರುವುದರಿಂದಲೇ ಭಯ ಆವರಿಸಿ, ಪ್ರತಿಭಟನಾ ಗುಣ ನಾಶ ಆಗಿದೆ, ನವರಾತ್ರಿಯಲ್ಲಿ ಪಾಲಿಸುವ ಈ ಪದ್ದತಿಯನ್ನು ಬಿಡಬಾರದು, ನಮ್ಮ ಶಾಸ್ತ್ರ, ವಿಜ್ಞಾನ, ಸಂಸ್ಕೃತಿ ಬಿಡಬಾರದು, ನಾನು ಯಾವ ಊರಿನಲ್ಲಿ ಇರುತ್ತೇನೋ, ಅಲ್ಲೇ ಪೂಜೆ ಮಾಡುತ್ತೇನೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply