LATEST NEWS
ರಾಮಮಂದಿರ ಹೇಳಿಕೆ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ವಿರುದ್ದ ತಿರುಗಿ ಬಿದ್ದ ಮುಸ್ಲಿಂ ಸಮುದಾಯ
ರಾಮಮಂದಿರ ಹೇಳಿಕೆ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ವಿರುದ್ದ ತಿರುಗಿ ಬಿದ್ದ ಮುಸ್ಲಿಂ ಸಮುದಾಯ
ಮಂಗಳೂರು ಡಿಸೆಂಬರ್ 3: ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ರಾಮಮಂದಿರ ಕುರಿತಾದ ಹೇಳಿಕೆ ಈಗ ದಕ್ಷಿಣಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರ ಹೇಳಿಕೆ ವಿರುದ್ದ ಮುಸ್ಲಿಂ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ದಕ್ಷಿಣಕನ್ನಡ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ . ಜನಾರ್ಧನ ಪೂಜಾರಿ ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಂಸದ ಮತ್ತು ಹಿರಿಯ ಕಾಂಗ್ರೇಸ್ ನಾಯಕರಾದ ಶ್ರೀ.ಬಿ.ಜನಾರ್ದನ ಪೂಜಾರಿ ಯವರು ಇತ್ತೀಚಿಗೇ ಅಯೋಧ್ಯೇಯ ಬಾಬ್ರಿಮಸೀದಿ ಮತ್ತು ರಾಮ ಜನ್ಮ ಭೂಮಿ ವಿವಾದಿತ ವ್ಯಾಜ್ಯ ಸುಪ್ರೀಂ ಕೋರ್ಟುವಿನಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಈ ಸಂಧರ್ಭದಲ್ಲಿ ಮಂಗಳೂರಿನಲ್ಲಿನ ಸಾಮಾಜಿಕ ಸಭೆಯೊಂದರಲ್ಲಿ ಹೇಳಿಕೆ ನೀಡಿ ಒಂದು ನಿರ್ಧಿಷ್ಟ ಸಮುದಾಯದ ವಿರುದ್ದ ಮತ್ತು ಇನ್ನೊಂದು ಸಮುದಾಯದ ಪರ ಮಾತನಾಡಿ, ಅವರನ್ನು ನಿರಂತರ ದಶಕಗಳಿಂದ ಚುನಾವಣೆಯಲ್ಲಿ ಬೇಂಬಲಿಸುತ್ತಾ ಬಂದಿರುವ ಒಂದು ನಿಷ್ಠೆಯ ಸಮುದಾಯ ದ ಧಾರ್ಮಿಕ ಭಾವನೆ ಮತ್ತು ನಂಬಿಕೆಗೆ ತೀವ್ರ ಘಾಸಿ ಉಂಟು ಮಾಡಿದ್ದಾರೆ.
ಜನಾರ್ಧನ ಪೂಜಾರಿಯವರ ಈ ವಿವಾದಾತ್ಮಕ ಹೇಳಿಕೇಯಿಂದಾಗಿ ಮುಸ್ಲಿಂ ಅಲ್ಪ ಸಂಖ್ಯಾತ ಸಮುದಾಯವು ಅವರು ಪ್ರತಿನಿಧಿಸುತ್ತಿರುವ ಪಕ್ಷಕ್ಕೇ ತೀವ್ರ ಹಾನಿ ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ, ಹಿರಿಯ ರಾಜಕೀಯ ನಾಯಕರಾಗಿ ಅವರ ನಡೇ ಸಂಶಯಕ್ಕೇ ಎಡೇ ಯಾಗಿದೇ, ಅವರು ಪ್ರತಿನಿಧಿಸುತ್ತಿರುವ ಪಕ್ಷದ ಸಿದ್ದಾಂತಕ್ಕೇ ಹಾನಿಯಾಗುವುದರಲ್ಲಿ ಸಂಶಯವಿಲ್ಲ, ಮುಸ್ಲಿಂ ಅಲ್ಪ ಸಂಖ್ಯಾತ ಮತದಾರರು ಈ ರೀತಿಯ ಧ್ವಂದ ನಿಲುವು ಹೊಂದಿದ ನಾಯಕರನ್ನು ವಿಶ್ವಾಸ ಕಳೆದುಕೊಳ್ಳುವ ಕಾಲ ದೂರವಿಲ್ಲ.
ಜನಾರ್ದನ ಪೂಜಾರಿಯವರ ದ್ವಂದ ನಿಲುವಿನ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಮುಸ್ಲಿಂ ಅಲ್ಪ ಸಂಖ್ಯಾತ ಕಾಂಗ್ರೇಸ್ ನಾಯಕರು ಮೌನ ಮುರಿದು ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದಾರೆ.