Connect with us

    LATEST NEWS

    ಮುಂಬೈ : ಭಾಷಣದ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ..!

    ಮುಂಬೈ : ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ನಡೆದಿದೆ.

    ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪುಸಾದ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗಡ್ಕರಿ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.ಈ ಕಾರ್ಯಕ್ರಮದಲ್ಲಿ ವೈದ್ಯರು ಇದ್ದ ಕಾರಣ ಅವರನ್ನು ಪರೀಕ್ಷೆ ಮಾಡಿ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ತಕ್ಷಣ ಅವರ ಗನ್ ಮ್ಯಾನ್ ಹಾಗೂ ಪಕ್ಷದ ನಾಯಕರು ಧಾವಿಸಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. “ಮಹಾರಾಷ್ಟ್ರದ ಪುಸಾದ್‌ನಲ್ಲಿ ನಡೆದ ರಾಲಿಯಲ್ಲಿ ಬಿಸಿಲಿನ ಕಾರಣದಿಂದ ನಾನು ಅಸ್ವಸ್ಥನಾಗಿದ್ದೆ. ಆದರೆ ಈಗ ನಾನು ಸಂಪೂರ್ಣವಾಗಿ ಸರಿಯಾಗಿದ್ದೇನೆ ಮತ್ತು ಮುಂದಿನ ರಾಲಿಯಲ್ಲಿ ಭಾಗವಹಿಸಲು ವರುದ್‌ಗೆ ಹೋಗುತ್ತಿದ್ದೇನೆ” ಎಂದು 66 ವರ್ಷದ ನಿತಿನ್ ಗಡ್ಕರಿ ಅವರು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *