Connect with us

LATEST NEWS

ಮುಂಬೈ – ಲೋಕಲ್ ಟ್ರೈನ್ ನಲ್ಲಿ ಸೀಟ್ ಗಾಗಿ ಜಡೆ ಜಗಳ

ಮುಂಬೈ ಅಕ್ಟೋಬರ್ 07: ಲೋಕಲ್ ಟ್ರೈನ್ ನಲ್ಲಿ ಸೀಟ್ ಗಾಗಿ ಮಹಿಳೆಯರು ಹೊಡೆದಾಡಿಕೊಂಡ ಘಟನೆ ಮುಂಬೈ ಥಾಣೆ-ಪನ್ವೆಲ್ ಲೋಕಲ್ ರೈಲಿನ ಮಹಿಳಾ​ ಕಂಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ರೈಲಿನೊಳಗಿನ ಸೀಟುಗಳಿಗಾಗಿ ಮೂವರು ಮಹಿಳಾ ಪ್ರಯಾಣಿಕರ ಮಧ್ಯೆ ಜಗಳ ಶುರುವಾಗಿದೆ. ನಂತರ ಈ ಜಗಳದಲ್ಲಿ ಉಳಿದ ಮಹಿಳೆಯರೂ ತೊಡಗಿಕೊಂಡಾಗ ಅದು ತೀವ್ರ ಹೊಡೆದಾಟಕ್ಕೆ ತಿರುಗಿಕೊಂಡು ಇಡೀ ಕಂಪಾರ್ಟ್​ಮೆಂಟ್​ನಲ್ಲಿ ಭಯಾನಕ ದೃಶ್ಯ ನಿರ್ಮಾಣವಾಗಿದೆ.

ಈ ಜಗಳವನ್ನು ಬಗೆಹರಿಸಲು ಮಹಿಳಾ ಪೊಲೀಸ್​ ಪ್ರಯತ್ನಿಸಿದಾಗ ಕೆಲ ಮಹಿಳೆಯರಿಂದಲೇ ಪೊಲೀಸ್ ಹಲ್ಲೆಗೊಳಗಾದರು. ಮಹಿಳಾ ಪೊಲೀಸ್ ಸೇರಿದಂತೆ ಮೂರು ಮಹಿಳೆಯರು ಗಾಯಗೊಂಡಿದ್ದಾರೆ. ಪೊಲೀಸ್ ಮತ್ತು ಇನ್ನೊಬ್ಬ ಮಹಿಳೆಯ ಹಣೆಗೆ ಏಟು ಬಿದ್ದು ರಕ್ತಸ್ರಾವವಾಗಿದೆ. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿರುವುದಾಗಿ ಕಟಾರೆ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *