LATEST NEWS
ಮುಂಬೈ : Best ಬಸ್ ಬ್ರೇಕ್ ಫೇಲ್, ನಾಲ್ಕು ಮಂದಿ ಮೃತ್ಯು, 29 ಮಂದಿ ಗಾಯಾಳು-15ಕ್ಕೂ ಅಧಿಕ ವಾಹನಗಳು ಜಖಂ..!
ಮುಂಬೈ: ಮುಂಬೈ ಸಾರಿ ಇಲಾಖೆ ಸೇರಿದ ಬೆಸ್ಟ್ (Best) ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಸರಣಿ ಅಪಘಾತ ಸಂಭವಿಸಿದ್ದು ನಾಲ್ವರು ಪಾದಾಚಾರಿಗಳು ಪ್ರಾಣ ಕಳಕೊಂಡಿದ್ದರೆ ಅನೇಕರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯಲ್ಲಿ ಐದಾರು ಆಟೊರಿಕ್ಷಾ, 10ಕ್ಕೂ ಹೆಚ್ಚು ದ್ವಿಚಕ್ರ ವಾಹನ ಮತ್ತು 10ಕ್ಕೂ ಹೆಚ್ಚು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. 29 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವಾಗಿದೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದು, ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸೋಮವಾರ ರಾತ್ರಿ 9.30ರ ವೇಳೆಗೆ ಮುಂಬೈನ ಪಶ್ಚಿಮ ಕುರ್ಲಾದಲ್ಲಿರುವ ಎಸ್.ಜಿ.ಬರ್ವೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಅಂತಿಮವಾಗಿ ಬಸ್ಸು ಹೌಸಿಂಗ್ ಕಾಲೋನಿಯೊಂದಕ್ಕೆ ನುಗ್ಗಿ ನಿಂತಿತು ಎಂದು ಹೇಳಲಾಗಿದೆ. ಬಸ್ಸಿನ ಬ್ರೇಕ್ ನಿಷ್ಕ್ರಿಯವಾದದ್ದು ದುರಂತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕ ಸಂಜಯ್ ಮೋರೆ (43) ಎಂಬಾತನನ್ನು ಬಂಧಿಸಲಾಗಿದೆ. ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾಹನದ ತಪಾಸಣೆಗಾಗಿ ಆರ್ ಟಿಓ ತಜ್ಞರು ಮತ್ತು ಬೆಸ್ಟ್ ಎಂಜಿನಿಯರ್ ಗಳನ್ನು ಕರೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಬಸ್ಸು ಎಲೆಕ್ಟ್ರಿಕ್ ಎಜಿ ವೆಟ್ ಲೀಸ್ ಬಸ್ ಆಗಿದ್ದು, ಖಾಸಗಿ ಗುತ್ತಿಗೆದಾರರು ನೇಮಕ ಮಾಡಿಕೊಂಡ ಚಾಲಕ ಬಸ್ಸನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮೃತರನ್ನು ಶಿವಂ ಕಶ್ಯಪ್ (18), ಕನೀಝ್ ಫಾತಿಮಾ (55),ಮಹಫಿಲ್ ಶಾ (10) ಮತ್ತು ಅನಮ್ ಶೇಕ್ (20) ಎಂದು ಗುರುತಿಸಲಾಗಿದೆ. 332 ಮಾರ್ಗಸಂಖ್ಯೆಯ ಈ ಬಸ್ ಕುರ್ಲಾ ಮತ್ತು ಅಂಧೇರಿ ನಡುವೆ ಸಂಚರಿಸುತ್ತಿತ್ತು. ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತ್ಯನಾರಾಯಣ ಚೌಧರಿ ಹೇಳಿದ್ದಾರೆ.