Connect with us

    LATEST NEWS

    ಮುಂಬೈ – ಗಗನಸಖಿಯ ಕತ್ತು ಸೀಳಿ ಕೊಲೆ

    ಮುಂಬೈ ಸೆಪ್ಟೆಂಬರ್ 04 : ಗಗನಸಖಿಯೊಬ್ಬರ ಮೃತದೇಹ ಕತ್ತುಸಿಳಿದ ಸ್ಥಿತಿಯಲ್ಲಿ ವಾಣಿಜ್ಯ ನಗರಿ ಮುಂಬೈನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಪತ್ತೆಯಾಗಿದೆ.


    ಮೃತರನ್ನು ಛತ್ತೀಸ್ ಗಡ್ ಮೂಲದ ರೂಪಲ್ ಓಗ್ರೆ(24) ಎಂದು ಗುರುತಿಸಲಾಗಿದೆ. ಏರ್ ಇಂಡಿಯಾದಲ್ಲಿ ತರಬೇತಿಗಾಗಿ ಏಪ್ರಿಲ್‌ನಲ್ಲಿ ಮುಂಬೈಗೆ ಬಂದಿದ್ದರು ಎಂದು ಹೇಳಲಾಗಿದ್ದು, ಅವರು ಅಂಧೇರಿಯ ಮರೋಲ್ ಪ್ರದೇಶದ ಕ್ರಿಶನ್‌ಲಾಲ್ ಮರ್ವಾಹ್ ಮಾರ್ಗದಲ್ಲಿರುವ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿರುವ ಫ್ಲಾಟ್‌ನಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.


    ಛತ್ತೀಸ್‌ಗಢ ಮೂಲದ ರೂಪಲ್ ಅವರು ಏರ್ ಇಂಡಿಯಾದಲ್ಲಿ ತರಬೇತಿಗಾಗಿ ಏಪ್ರಿಲ್‌ನಲ್ಲಿ ಮುಂಬೈಗೆ ಬಂದಿದ್ದರು. ಆಕೆ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಮರೋಲ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಳು. ಫ್ಲಾಟ್‌ನಲ್ಲಿದ್ದ ಇಬ್ಬರು ಎಂಟು ದಿನಗಳ ಹಿಂದೆ ಮನೆಗೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


    ಭಾನುವಾರ ಬೆಳಿಗ್ಗೆ ರೂಪಲ್ ತನ್ನ ಕುಟುಂಬ ಸದಸ್ಯರೊಂದಿಗೆ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದರು. ಇದಾದ ನಂತರ ಹಲವು ಬಾರಿ ರೂಪಾಲ್ ಗೆ ಕರೆ ಮಾಡಿದರೂ ಫೋನ್ ತೆಗೆಯಲಿಲ್ಲ. ಇದರಿಂದ ಕುಟುಂಬಸ್ಥರು ಮುಂಬೈನಲ್ಲಿರುವ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ. ಅವರು ಫ್ಲಾಟ್‌ಗೆ ಬಂದು ಹುಡುಕಿದರು ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಲವು ಬಾರಿ ಬೆಲ್ ಮಾಡಿದರೂ ಬಾಗಿಲು ತೆರೆಯದೇ ಇದ್ದಾಗ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಂದು ಡ್ಯೂಪ್ಲಿಕೇಟ್ ಕೀಲಿಯಿಂದ ಫ್ಲಾಟ್‌ನ ಬಾಗಿಲು ತೆರೆದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply