LATEST NEWS
ಮುಲ್ಕಿ ಠಾಣಾ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ನಿಧನ

ಮುಲ್ಕಿ ಠಾಣಾ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ನಿಧನ
ಮಂಗಳೂರು, ಮಾರ್ಚ್ 11 : ಮುಲ್ಕಿ ಠಾಣಾ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಅವರು ನಿಧನ ಹೊಂದಿದ್ದಾರೆ.
ಮಂಗಳೂರು ನಗರ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯ ಮೂಲ್ಕಿ ಠಾಣೆಯಲ್ಲಿ ಉಪ ನಿರೀಕ್ಷಕರಾಗಿ ಶಾಂತಪ್ಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

59 ವರ್ಷದ ಶಾಂತಪ್ಪ ಅವರ ನಿವೃತ್ತಿಗೆ ಒಂದೇ ವರ್ಷ ಬಾಕಿ ಇತ್ತು.
ಕಳೆದ ಒಂದು ತಿಂಗಳಿನಿಂದ ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಅವರು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಮುಂಜಾನೆ ಸುಮಾರು 3.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಕಾನ್ಸ್ ಸ್ಟೇಬಲ್ ಆಗಿ ಪೋಲಿಸ್ ಇಲಾಖೆಗೆ ಸೇರಿದ ಶಾಂತಪ್ಪ ಅವರು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪೋಲಿಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆ ವಿಭಜನೆಗೊಂಡ ಸಮಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ಮುಂದುವರೆಸಿದ್ದರು.
ಕಳೆದ 5 ವರ್ಷಗಳಿಂದ ಉಡುಪಿ ಕರಾವಳಿ ಕಾವಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅವರು ಉಪ ನಿರೀಕ್ಷಕರಾಗಿ ಭಡ್ತಿ ಹೊಂದಿ ಕಳೆದ 2 ವರ್ಷಗಳಿಂದ ಮುಲ್ಕಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೇಯಲ್ಲಿ ಅವರು ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು.