LATEST NEWS
ಮುಲ್ಕಿ -ಶಾಲೆಯಿಂದ ಬಂದ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಂದೆ…!!

ಮುಲ್ಕಿ ಜೂನ್ 23: ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ಹತ್ಯೆಗೆ ಯತ್ನಿಸಿದ್ದು, ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಿನ್ನಿಗೋಳಿ ಸಮೀಪ ನಡೆದಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸಾವನಪ್ಪಿದ್ದಾರೆ.
ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಶಾಲೆಯಿಂದ ಬಂದ ಮಕ್ಕಳನ್ನು ಮನೆಯ ಪಕ್ಕದಲ್ಲಿದ್ದ ಬಾವಿಗೆ ತಳ್ಳಿದ್ದಾನೆ. ಬಳಿಕ ಮನೆಗೆ ಬಂದ ಪತ್ನಿ ಹಿತೇಶ್ ಶೆಟ್ಟಿಗಾರ್ ಅವರಲ್ಲಿ ಮಕ್ಕಳ ಬಗ್ಗೆ ಕೇಳಿದಾಗ ಎಲೋ ಅಡಗಿರಬಹುದು ಎಂದು ಹೇಳಿದ್ದಾನೆ, ಮನೆಯಲ್ಲಿ ಹುಡುಕಿ ಸಿಗದಿದ್ದಾಗ ಸಮೀಪದ ಮನೆಯ ಬಾವಿ ಕಡೆ ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳು ನೀರಿನಲ್ಲಿ ಕಂಡು ರಕ್ಷಣೆಗೆ ಮುಂದಾದಾಗ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಪತ್ನಿಯನ್ನೂ ಬಾವಿಗೆ ದೂಡಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪತ್ನಿ ಲಕ್ಷಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾದ್ಯವಾಗದೆ ಕೂಗಿದಾಗ ರಸ್ತೆಬದಿಯಲ್ಲಿ ಹೂ ಮಾರುವವವರು ಮತ್ತು ಇಬ್ಬರು ಬಾವಿಯ ಬಳಿ ಬಂದು ಹಿತೇಶ್ ಮತ್ತು ಲಕ್ಷೀ ಅವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಕೂಡಲೇ ಮೂಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳ ಸಹಾಯದಿಂದ ಮೂಲ್ಕಿ ಪೋಲಿಸರು ಮೂವರೂ ಮಕ್ಕಳನ್ನು ಮೆಲಕ್ಕೆತ್ತಲಾಯಿತು. ಆದರೆ ಚಿಂತಾಜನಕ ಸ್ಥಿತಿಯಲ್ಲಿ ಅಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಮೃತಪಟ್ಟಿದ್ದಾರೆ.