Connect with us

    LATEST NEWS

    ಮುಲ್ಕಿ – ಹಳೆಯಂಗಡಿ ಗ್ರಾಮಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚನಾವಣೆ – ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

    ಮಂಗಳೂರು ಅಗಸ್ಟ್ 11: ಮೂಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಗೊಂದಲದ ಗೂಡಾಗಿದ್ದು, ಸ್ಥಳದಲ್ಲಿ ಎರಡು ಪಕ್ಷದ ಬೆಂಬಲಿಗರು ಹಳೆಯಂಗಡಿ ಗ್ರಾಮ ಪಂಚಾಯಿತಿನ ಹೊರಗಡೆ ಜಮಾಯಿಸಿ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿತ್ತು.


    ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ವಾರ್ಡ್ ಗಳಿದ್ದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು 11 ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು 11 ಮಂದಿ ಆಯ್ಕೆಯಾಗಿದ್ದರು. ಮೊದಲ ಅವಧಿಯಲ್ಲಿ ಎರಡು ಪಕ್ಷಗಳ ಬೆಂಬಲಿತರ ಸಮಬಲ ದಿಂದ ಚೀಟಿ ಎತ್ತುವ‌ ಮೂಲಕ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಧಿಕಾರ ಪಟ್ಟ ಒಲಿದು ಬಂದಿತ್ತು. ಈ ಬಾರಿ ಚುನಾವಣೆ ಸಂದರ್ಭ ಕಾಂಗ್ರೇಸ್ ಬೆಂಬಲಿತ ಮಹಿಳಾ ಸದಸ್ಯರೊಬ್ಬರು ಭ್ರಷ್ಟಾಚಾರ ಆರೋಪದ ಕಾರಣ ಅವರ ಸದಸ್ಯ ರದ್ದಾಗಿತ್ತು, ಕೋರ್ಟ್ ತೀರ್ಪಿನ ಪ್ರಕಾರ ಆ ಮಹಿಳೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರ ವಾದವಾದವಾದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂಬುದು ಕಾಂಗ್ರೇಸ್ ಕಾರ್ಯಕರ್ತರ ವಾದವಾಗಿತ್ತು. ಈ ಕಾರಣದಿಂದ ಚುನಾವಣೆ ನಡೆಯದೆ ಸ್ಥಳದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಸದಸ್ಯರು ಜಮಾಯಿಸಿ ಮಾತಿಗೆ ಮಾತು ಬೆಳೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು,


    ಮಧ್ಯಾಹ್ನ 12 ಗಂಟೆಗೆ ಚುನಾವಣಾ ಪ್ರಕ್ರಿಯೆ ನಡೆದು 1.00 ಗಂಟೆಗೆ ಫಲಿತಾಂಶ ಬರಬೇಕಾಗಿದ್ದರೂ, ಸಂಜೆ 5 ಗಂಟೆ ವರೆಗೆ ಚುನಾವಣೆ ನಡೆಯಲ್ಲಿಲ್ಲ. ನಂತರ ಚುನಾವಣಾ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮಾಹಿತಿ ಪಡೆದು ಕಾಂಗ್ರೇಸ್ ಬೆಂಬಲಿತ ಮಹಿಳಾ ಸದಸ್ಯರನ್ನು ಹೊರಗಿಟ್ಟು, ಚುನಾವಣಾ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಬಿಜೆಪಿ ಬೆಂಬಲಿತ ಪೂರ್ಣಿಮಾ ಅಧ್ಯಕ್ಷರಾಗಿ ಮತ್ತು ಚಂದ್ರಿಕಾ ಕೋಟ್ಯಾನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತರು ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆ ಕಾಂಗ್ರೇಸ್ ಬೆಂಬಲಿತರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು. ಮದ್ಯಾಹ್ನದಿಂದಲ್ಲೇ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮಿಥುನ್ ರೈ ಸ್ಥಳದಲ್ಲಿ ಇದ್ದರು. ಈ ಮಧ್ಯೆ ಪರಿಸ್ಥಿತಿ ಬಿಗಾಡಾಯಿಸುವ ಲಕ್ಷಣ ಗೋಚರಿಸುತ್ತಿದಂತೆ ಪೋಲೀಸರು ಬಿಗಿ ಬಂದೋಬಸ್ತ್ ನಡೆಸಿ ಪರಿಸ್ಥಿಯನ್ನು ಹತೋಟಿಗೆ ತಂದರು.

    Share Information
    Advertisement
    Click to comment

    You must be logged in to post a comment Login

    Leave a Reply