LATEST NEWS
SDPI ಪ್ರತಿಭಟನೆ ಎಚ್ಚರಿಕೆಗೆ ಮಣಿದ ಎಸ್ ಞಝೆಡ್

SDPI ಪ್ರತಿಭಟನೆ ಎಚ್ಚರಿಕೆಗೆ ಮಣಿದ ಎಸ್ ಞಝೆಡ್
ಮಂಗಳೂರು ಸೆಪ್ಟೆಂಬರ್ 4: SDPI ಪ್ರತಿಭಟನೆ ನಡೆಸುವ ಎಚ್ಚರಿಕೆಗೆ ಮಣಿದ ಸೆಝ್ ಇಂದು ಬೆಳ್ಳಂಬೆಳಗ್ಗೆ ರಸ್ತೆ ದುರಸ್ತಿ ಕಾಮಗಾರಿಯನ್ನು ಪ್ರಾರಂಭಿಸಿದೆ.
ಜೋಕಟ್ಟೆ – ಕೂಳೂರು ತೀರಾ ಹದೆಗೆಟ್ಟ ರಸ್ತೆಯ ಕಾಮಗಾರಿಗಾಗಿ ಆಗ್ರಹಿಸಿ SDPI ಜೋಕಟ್ಟೆ ನಾಳೆ (05.09.2018) ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವ ಕುರಿತು ತೀರ್ಮಾನಿಸಲಾಗಿತ್ತು. ಆದರೆ ಎಸ್ ಡಿಪಿಐ ಪ್ರತಿಭಟನೆಯ ಕಾವಿಗೆ ಮಣಿದ ಮಂಗಳೂರು ಸೆಝ್, ಇಂದು ಬೆಳಗ್ಗೆಯಿಂದಲೇ ಹದೆಗೆಟ್ಟ ರಸ್ತೆಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಕಂಪೆನಿ ನೀಡುವ ಭರವಸೆಗಳನ್ನು ನಂಬಿ ಕೂರದೇ, ಬೀದಿಗಿಳಿದು ಹೋರಾಟಕ್ಕಿಳಿದರೆ ಮಾತ್ರ ಫಲ ಖಂಡಿತ ಎನ್ನುವಂತೆ ಸದ್ಯಕ್ಕೆ ಜೋಕಟ್ಟೆಯ ಊರ ನಾಗರಿಕರಿಗೆ ಹದೆಗೆಟ್ಟ ರಸ್ತೆಯ ಕರ್ಮ ಕಾಂಡವೊಂದು ಪ್ರತಿಭಟನೆಯ ಕಾವಿಗೆ ಪರಿಹಾರವಾದಂತಾಗಿದೆ.