LATEST NEWS
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ – ಪರಿಹಾರದ ಭರವಸೆ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ – ಪರಿಹಾರದ ಭರವಸೆ
ಮಂಗಳೂರು ಮೇ 30: ಮಹಾಮಳೆಗೆ ತುತ್ತಾಗಿದ್ದ ಕರಾವಳಿಯಲ್ಲಿ ಇಂದು ಮಳೆ ಪ್ರಮಾಣ ಕಡಿಮೆಯಾಗಿದೆ. ನಿನ್ನೆ ಸುರಿದಿದ್ದ ಬಾರಿ ಮಳೆಗೆ ತತ್ತರಿಸಿ ಹೋಗಿದ್ದ ಜಿಲ್ಲೆ ಇಂದು ಸಹಜ ಸ್ಥಿತಿಗೆ ಬಂದಿದೆ.
ಈ ನಡುವೆ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಬಿಜೈಆನೆಗುಂಡಿ, ಶಕ್ತಿನಗರ, ಕುಂಟಲ್ಪಾಡಿ ಮತ್ತಿತರ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಸುರಿದ ಮಳೆಗೆ ಬಿಜೈ ಆನೆಗುಂಡಿ ಪ್ರದೇಶದಲ್ಲಿ ಸುಮಾರು 32 ಮನೆಗಳಿಗೆ ಹಾನಿಯಾಗಿವೆ , ಕದ್ರಿ ಪ್ರದೇಶದಲ್ಲಿ ಸುಮಾರು 10 ಸ್ಥಳಗಳಲ್ಲಿ ಮನೆಗಳ ಹಾನಿ , ಶಕ್ತಿನಗರ , ಕುಂಟಲ್ಪಾಡಿ ಪ್ರದೇಶದಲ್ಲಿ 5 ಮನೆಗಳು ಹಾನಿಯಾಗಿವೆ , ಸರಿಪಳ್ಳ ಕೃತಕ ನೆರೆಯಿಂದ ಮನೆಗಳಿಗೆ ಹಾನಿಯಾಗಿದ್ದು ಶಾಸಕರು ಹಾಗೂ ಸಂಸದರು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ತುರ್ತು ಪರಿಸ್ಥಿತಿ ನಿಭಾಯಿಸಲು ಬಿಜೆಪಿ ವತಿಯಿಂದ ಎರಡು ಸಹಾಯ ಕೇಂದ್ರ ತೆರೆಯಲಾಗಿದ್ದು, ಮಂಗಳೂರು ನಗರದಲ್ಲಾದ ಈ ಅವಾಂತರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಯ ನಿರ್ಲಕ್ಷ್ಯ ವೇ ಕಾರಣ ಎಂದು ಅವರು ಕಿಡಿಕಾರಿದರು.
ನಗರದಲ್ಲಿ ಮಳೆಗೆ ಸಂಗ್ರಹ ವಾಗಿದ್ದ ಮಳೆ ನೀರು ಸರಿಯಾಗಿ ಹರಿದು ಹೋಗಿಲ್ಲ. ನಗರದಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದೆ ಈ ಒತ್ತುವರಿ ಕುರಿತು ಜಿಲ್ಲಾಧಿಕಾಯವರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಒತ್ತುವರಿ ಮಾಡಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈ ಗೊಳ್ಳಲು ತಿಳಿಸಿದ್ದೇನೆ ಎಂದು ಅವರು ಹೇಳಿದರು.