Connect with us

    LATEST NEWS

    ಯಾವಾಗಲೂ ಸರ್ಕಿಟ್ ಹೌಸ್ ನಲ್ಲಿ ಮಲಗಿರುವ ಆಲಸಿ ಸಂಸದ ನಳಿನ್ ಕುಮಾರ್ – ರಮಾನಾಥ ರೈ

    ಯಾವಾಗಲೂ ಸರ್ಕಿಟ್ ಹೌಸ್ ನಲ್ಲಿ ಮಲಗಿರುವ ಆಲಸಿ ಸಂಸದ ನಳಿನ್ ಕುಮಾರ್ – ರಮಾನಾಥ ರೈ

    ಮಂಗಳೂರು ಜುಲೈ 2: ಸಂಸದ ನಳಿನ್ ಕುಮಾರ್ ಕಟೀಲ್ ಯಾವಾಗಲೂ ಸರ್ಕಿಟ್ ಹೌಸ್ ನಲ್ಲಿಯೇ ಮಲಗಿರುವ ಅತ್ಯಂತ ಆಲಸಿ ಸಂಸದ ಎಂದು ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ಧಿ ಯೋಜನೆಗಳ ಬಗ್ಗೆ ನಡೆಯುವ ಸಭೆಗಳಲ್ಲಿ ಭಾಗವಹಿಸದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿವೃದ್ಧಿ ಕಾಮಗಾರಿಗಳ ವೇಗದ ಮಿತಿಯೇ ಗೊತ್ತಿಲ್ಲ. ಡಾಲರ್ ಎಂದರೇ ಗೊತ್ತಿಲ್ಲದೆ ಸಂಸದ ಎಂದು ಅವರು ವ್ಯಂಗ್ಯವಾಡಿದರು.

    ಸಂಸದ ನಳಿನ್ ಕುಮಾರ್ ಕಟೀಲ್ ಅತ್ಯಂತ ಸೊಂಬೇರಿ ಸಂಸದ, ಈ ವರೆಗೆ ಮಲಗಿದ್ದ ನಳಿನ ಕುಮಾರ್ ಕಟೀಲ್ ಲೋಕಸಭಾ ಚುನಾವಣೆ ಹತ್ತಿರವಾಗುತಿದ್ದಂತೆ ಈಗ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ರಾಜ್ಯ ಸರಕಾರ ನಡೆಸಿದ ಆಭಿವೃದ್ಧಿ ಕಾಮಗಾರಿಗಳನ್ನು ತನ್ನ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ಅರೋಪಿಸಿದರು.

    ಮುಂಬರುವ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು ಮುಂಬರುವ ಲೋಕ ಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಟಿಕೆಟ್ ನೀಡುವುದು ಬಿಡುವುದು ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಅವರು ಮಾರ್ಮಿಕವಾಗಿ ಹೇಳಿದರು. ರಾಜ್ಯದಲ್ಲಿಅಸ್ಥಿತ್ವದಲ್ಲಿವ ಮೈತ್ರಿ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಲ್ಲವೂ ಸುಸುತ್ರವಾಗಿಯೇ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply