KARNATAKA
ಯಾತ್ರರ್ಥಿಗಳಿಗೆ ‘ಟ್ರೈನ್ ಮಿಸ್’., ಹಿರಿಯ ನಾಗರಿಕರ ತೊಂದರೆಗೆ ಸ್ಪಂದಿಸಿ ಮತ್ತೊಂದು ಬೋಗಿ ಜೋಡಿಸಿ ಕಳಿಸಿಕೊಟ್ಟ ಸಂಸದ ಕೋಟ..!!
ಉಡುಪಿ : ಉತ್ತರ ಭಾರತ ಪ್ರವಾಸ ಹೊರಟ ಉಡುಪಿ ಜಿಲ್ಲೆ ಹಿರಿಯ ನಾಗರಿಕರ ತಂಡಕ್ಕೆ ರೈಲು ಮಿಸ್ಸಾಗಿ ಪರದಾಡುತ್ತಿದ್ದ ಸಂದರ್ಭ ಅವರ ಸಹಾಯಕ್ಕೆ ಧಾವಿಸಿದ ಸಂಸದ ಕೋಟ (kota srinivas poojary) ಅವರು ಮತ್ತೊಂದು ಬೋಗಿ ಜೋಡಿಸಿ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಉತ್ತರ ಭಾರತ ಪ್ರವಾಸ ಮುಗಿಸಿ ಮುಂಬೈಗೆ ಬಂದು ಮತ್ಸ್ಯಗಂದಾ ರೈಲು ಏರ ಬೇಕಿದ್ದ ಉಡುಪಿ ಜಿಲ್ಲೆಯ ಸುಮಾರು 80 ಜನ ಹಿರೀಯ ನಾಗರಿಕರಿದ್ದ ಗುಂಪು ರಾಂಚಿ ಮುಂಬಯಿ ಎಕ್ಸ್ ಪ್ರೆಸ್ 10 ಘಂಟೆಗಳ ವಿಳಂಬದಿಂದ ಮಾರ್ಗದ ಮಧ್ಯದಲ್ಲಿ ಸಿಕ್ಕಿಬಿದ್ದ ಸ್ಥಿತಿ ನಿರ್ಮಾಣವಾಗಿತ್ತು. ಹಿರೀಯ ನಾಗರೀಕರೇ ತುಂಬಿದ್ದ ಈ ಗುಂಪು ಮುಂಬಯಿ ತಲುಪುವ ಮೊದಲೇ ಮತ್ಸಗಂದಾ ರೈಲು ಹೊರಟಾಗಿತ್ತು ಹೀಗಾಗಿ, ಈ ಗುಂಪಿನಲ್ಲಿ ವೈದ್ಯಕೀಯ ಅಗತ್ಯಗಳೂ ಬೇಕಾದ ಪ್ರಯಾಣಿಕರಿದ್ದ ಕಾರಣ ,ಗುಂಪಿನವರು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ದೂರವಾಣಿ ಸಂದೇಶ ಕಳಿಸಿದ್ದರು.ಪ್ರಯಾಣಿಕರ ಸಮಸ್ಯೆಯ ವಿವರ ಸಿಕ್ಕ ತಕ್ಷಣ ಕಾರ್ಯತತ್ಪರರಾದ ಉಡುಪಿ ಸಂಸದರು ದೆಹಲಿಯ ರೈಲ್ವೇ ಸಚಿವಾಲಯದ ಜತೆ ಮಾತುಕಥೆ ನಡೆಸಿ ಮಂಗಳೂರು ಕಡೆ ಬರ ಬೇಕಾದ ಛತ್ರಪತಿ ಶಿವಾಜಿ ಟರ್ಮಿನಸ್ ಮಂಗಳೂರು ರೈಲಿಗೆ ವಿಶೇಷ ಬೋಗಿಯ ವ್ಯವಸ್ತೆ ಮಾಡಿದರು. ರೈಲು ಮಂಡಳಿಯಿಂದ ಈ ಬಗ್ಗೆ ಸೆಂಟ್ರಲ್ ರೈಲ್ವೆಗೆ ಆದೇಶ ಬಂದ ಕೂಡಲೇ ಹೆಚ್ಚುವರಿ ಬೋಗಿಯ ಅಳವಡಿಕೆ ನಡೆದಿದ್ದು, ಸಮಸ್ಯೆಗೆ ಸಿಲುಕಿದ್ದ ಗುಂಪು ಈ ಕೋಚ್ ಮೂಲಕ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಸಂಸದ ಶ್ರೀನಿವಾಸ್ ಪೂಜಾರಿಯವರ ಜತೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿದ ರೈಲ್ವೇ ರಾಜ್ಯ ಸಚಿವ ಸೋಮಣ್ಣನವರಿಗೆ ಹಾಗು ಅವರ ಕಚೇರಿಯ ಸಿಬ್ಬಂದಿಗಳಿಗೆ ಸಂಸದರು ದನ್ಯವಾದ ಅರ್ಪಿಸಿದ್ದಾರೆ. ಸಂಸದರ ಕ್ಷಿಪ್ರ ಕ್ರಮಕ್ಕೆ ಪ್ರಯಾಣಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.