LATEST NEWS
ಅಲ್ಲಾಹು ಇಲ್ಲ ಎನ್ನುವ ವ್ಯಕ್ತಿ ಹೇಗೆ ಸಮುದಾಯದ ಮತ ಕೇಳುತ್ತಾನೆ- ಮೊಯಿದ್ದಿನ್ ಬಾವಾ

ಅಲ್ಲಾಹು ಇಲ್ಲ ಎನ್ನುವ ವ್ಯಕ್ತಿ ಹೇಗೆ ಸಮುದಾಯದ ಮತ ಕೇಳುತ್ತಾನೆ- ಮೊಯಿದ್ದಿನ್ ಬಾವಾ
ಮಂಗಳೂರು ಮೇ 7: ದೇವರೇ ಇಲ್ಲ ಎನ್ನುವ ಕಮ್ಯುನಿಷ್ಠ ಪಕ್ಷದಲ್ಲಿದ್ದು, ಅಲ್ಲಾಹು ನೇ ಇಲ್ಲ ಎನ್ನುವ ವ್ಯಕ್ತಿ ಸಮುದಾಯದ ಮತವನ್ನು ಹೇಗೆ ಕೇಳುತ್ತಾನೆ ಎಂದು ಕಾಂಗ್ರೇಸ್ ಶಾಸಕ ಮೊಯಿದ್ದಿನ್ ಬಾವಾ ಪ್ರಶ್ನಿಸಿದ್ದಾರೆ.
ಸುರತ್ಕಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಪಿಐಎಂ ಪಕ್ಷದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮುನೀರ್ ಕಾಟಿಪಳ್ಳ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮುನೀರ್ ಕಾಟಿಪಳ್ಳ ಜಿಲ್ಲೆಯಲ್ಲಿ ತಾನೊಬ್ಬ ಜಾತ್ಯಾತೀತ ನಾಯಕನೆಂದು ಹೇಳಿಕೊಂಡು ಬಿಜೆಪಿ,ಆರ್ ಎಸ್ ಎಸ್ ವಿರುದ್ದ ಕಹಳೆ ಉದುತ್ತಿದ್ದ ಅವರ ಕಹಳೆ ಈಗ ಅದು ಬರೀ ಕಹಳೆಯಾಗಿದ್ದು, ಬಿಜೆಪಿಯೊಂದಿಗೆ 6 ತಿಂಗಳ ಹಿಂದೆಯೇ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಶಾಸಕ ಮೊಯಿದ್ದಿನ್ ಬಾವಾ ಆರೋಪಿಸಿದ್ದಾರೆ.

ದೇವರೆ ಇಲ್ಲ ಎನ್ನುವಂತಹ ಪಕ್ಷದಲ್ಲಿದ್ದು ಮನೀರ್ ಕಾಟಿಪಳ್ಳ ಹೇಗೆ ಸಮುದಾಯದ ವೋಟುಗಳನ್ನು ಕೇಳುತ್ತಾರೆ ಎಂದು ಮೊಯಿದ್ದೀನ್ ಬಾವಾ ಪ್ರಶ್ನಿಸಿದ್ದಾರೆ. ಮೊಯಿದ್ದೀನ್ ಬಾವಾ ಹೆದರುವ ವ್ಯಕ್ತಿಯಲ್ಲ, ನಾನು ಬೇವರು ಹರಿಸಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇನೆ ಎಂದು ಹೇಳಿದ ಅವರು, ಮುನೀರ್ ಕಾಟಿಪಳ್ಳ ನನಗೆ ಲೆಕ್ಕವೇ ಅಲ್ಲ, ನನ್ನ ಎದುರಾಳಿ ಎನಿದ್ದರೂ ಬಿಜೆಪಿ ಮಾತ್ರ ಎಂದು ಹೇಳಿದರು.