Connect with us

    UDUPI

    ಸಾವಿನಲ್ಲೂ ಒಂದಾದ ತಾಯಿ ಮಗ

    ಕುಂದಾಪುರದಲ್ಲೊಂದು ಹೃದಯ ವಿದ್ರಾವಕ ಘಟನೆ

    ಕುಂದಾಪುರ ಜೂನ್ 13: ಸಾವಿನಲ್ಲೂ ತಾಯಿಮಗ ಒಂದಾಗಿ ಸಾಗಿದ ಹೃದಯ ವಿದ್ರಾವಕ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಸಾರ್ವಜನಿಕ ಆಸ್ಪತ್ರೆ ಬಳಿಯ ಮಹಾರಾಜ್‌ ಜ್ಯುವೆಲ್ಲರ್‌ನ ಮಾಲಕರಾಗಿದ್ದ ದಿವಂಗತ ರಮೇಶ್‌ ಅವರ ಪತ್ನಿ ಶಕುಂತಲಾ ಶೇಟ್‌ ಅವರು ನಿನ್ನೆ ತಡರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದ್ದರು. ಇದಾದ ಒಂದೇ ಗಂಟೆಯೊಳಗೆ ಅವರ ಪುತ್ರ ಪ್ರಶಾಂತ್‌ ಶೇಟ್‌ ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


    ಪ್ರಶಾಂತ್ ಶೆಟ್ ಅವರು ಅವಿವಾಹಿತರಾಗಿದ್ದು ಪ್ರಸ್ತುತ ಮಹಾರಾಜ್‌ ಜುವೆಲ್ಲರ್‌ನ ಮಾಲಕರಾಗಿದ್ದರು. ಅಲ್ಲದೆ ಕುಂದಾಪುರದ ಜುವೆಲ್ಲರ್ಸ್‌ ಅಸೋಸಿಯೇಶನ್‌ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಇಂದು ನಗರದ ಚಿಕ್ಕನ್‌ಸಾಲ್‌ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬಂಧು – ಬಾಂಧವರ ಸಮ್ಮುಖದಲ್ಲಿ ತಾಯಿ ಹಾಗೂ ಮಗನ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಲಾಯಿತು.

    ಇಂದು ಕುಂದಾಪುರದ ಜುವೆಲ್ಲರ್ಸ್‌ ಅಸೋಸಿಯೇಶನ್‌ ಸೂಚನೆಯಂತೆ ಕುಂದಾಪುರದಲ್ಲಿರುವ ಚಿನ್ನದ ಮಳಿಗೆಗಳನ್ನು ಬಂದ್‌ ಮಾಡಿ ಮೃತರಿಗೆ ಗೌರವ ಸಲ್ಲಿಸಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *