Connect with us

LATEST NEWS

ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

ಕರಾಚಿ, ನವೆಂಬರ್ 14: ಭಾರತದಲ್ಲಿ ಉಗ್ರ ಕೃತ್ಯಕ್ಕೆ ನಡೆಸಲು ಪ್ರೋತ್ಸಾಹ ನೀಡುತ್ತಿದ್ದ ಜೈಶ್ ಉಗ್ರ ಮೌಲಾನಾ ರಹೀಂ ಉಲ್ಲಾ ತಾರೀಖ್ (Maulana Raheem Ullah Tariq) ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ.

ಈ ಮೂಲಕ ಕಳೆದ 20 ತಿಂಗಳಿನಲ್ಲಿ ಪಾಕಿಸ್ತಾನ, ಕೆನಡಾ ಸೇರಿದಂತೆ ದೇಶಗಳಲ್ಲಿ ನಿಗೂಢವಾಗಿ ಹತ್ಯೆಯಾದ ಮೋಸ್ಟ್‌ ವಾಂಟೆಡ್‌ ಉಗ್ರರ ಹತ್ಯಾ ಸರಣಿ ಮುಂದುವರಿದಿದೆ. ಭಾರತಕ್ಕೆ ಬೇಕಾದ 20ನೇ ಉಗ್ರ ತಾರೀಖ್ ಎಂದು ವರದಿಗಳು ಹೇಳಿವೆ.

ಜೈಶ್-ಇ-ಮೊಹಮ್ಮದ್ (Jaish-e-Mohammad) ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್‌ನ (Masood Azhar) ಆಪ್ತನಾಗಿದ್ದ ತಾರೀಖ್ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಯುವಕರನ್ನು ನೇಮಿಸುತ್ತಿದ್ದ. ಮಸೀದಿಗೆ ಪ್ರಾರ್ಥನೆ ತೆರಳುವಾಗ ಅಪರಿಚಿತ ವ್ಯಕ್ತಿಗಳು ತಾರೀಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪೊಲೀಸರು ಇದನ್ನು ಉದ್ದೇಶಿತ ಹತ್ಯೆ ಎಂದು ಕರೆದಿದ್ದಾರೆ. ವಿಧಿ ವಿಜ್ಞಾನ ತಂದ ತಾರೀಖ್‌ನಿಂದ ಮೊಬೈಲ್‌ ಫೋನ್‌ ಮತ್ತು ಇತರೇ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ. 3 ದಿನ ಹಿಂದಷ್ಟೇ ಲಷ್ಕರ್ ಉಗ್ರ ಅಕ್ರಂ ಖಾನ್ ಘಜೈನನ್ನು ಪಾಕ್‌ನ ಬಜ್‌‌ ನಲ್ಲಿ ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

2018ರ ಕಾಶ್ಮೀರದ ಸಂಜುವಾನ್ ಭಯೋತ್ಪಾದಕ ದಾಳಿಯ ರೂವಾರಿ ಸ್ವಾಜಾ ಶಾಹಿದ್, ಕಳೆದ ವಾರವಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶವವಾಗಿ ಪತ್ತೆಯಾಗಿದ್ದ. ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ.

Share Information
Advertisement
Click to comment

You must be logged in to post a comment Login

Leave a Reply