Connect with us

    LATEST NEWS

    ಸಂಭ್ರಮದ ಮೊಸರು ಕುಡಿಕೆಗೆ ಮಂಗಳೂರು ಸಜ್ಜು

    ಮಂಗಳೂರು, ಸೆಪ್ಟೆಂಬರ್ 14 : ಕರಾವಳಿಯಲ್ಲಿ ಶ್ರೀ ಕೃಷ್ಣ ಜನ್ಮದಿನ ಪ್ರಯುಕ್ತ ಇಂದು ಮೊಸರು ಕುಡಿಕೆ ಉತ್ಸವದ ಸಂಭ್ರಮ. ಇದಕ್ಕಾಗಿ ಎಲ್ಲೆಡೆ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಮಂಗಳೂರು ನಗರದ ಕದ್ರಿ, ಉರ್ವ ಸ್ಟೋರ್, ಉಳ್ಳಾಲ,ಅತ್ತಾವರಗಳಲ್ಲಿ ಇಂದು ಸಂಜೆ ಮೊಸರು ಕುಡಿಕೆ ಉತ್ಸವ ವೈಭವದಿಂದ ನಡೆಯಲಿದೆ.

    ಅದ್ದೂರಿ ಉತ್ಸವಕ್ಕೆ ಬೇಕಾದ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಅತ್ತಾವರದಲ್ಲಿ ಈ ಬಾರಿ 108 ನೇ ವರ್ಷದ ಮೊಸರು ಕುಡಿಕೆ ಸಂಭ್ರಮ.ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಕದ್ರಿ ಮಂಜುನಾಥ ದೇವಸ್ಥಾನದ ವಠಾರ, ಉತ್ಸವ ನಡೆಯಲಿರುವ ರಸ್ತೆಗಳು, ಬೀದಿಗಳು ಈಗಾಗಲೇ ಶೃಂಗಾರಗೊಂಡಿವೆ. ದಾರಿಯುದ್ದಕ್ಕೂ ಎತ್ತರದ ಕಮಾನುಗಳನ್ನು ಕಟ್ಟಿ ಅದರಲ್ಲಿ ವಿವಿಧ ಬಣ್ಣಗಳ, ಆಕಾರದ ಮೊಸರಿನ ಗಡಿಗೆಗಳನ್ನು ಕಟ್ಟಲಾಗಿದೆ. ಅದರೊಂದಿಗೆ ಬಾಳೆ ಹಣ್ಣು, ಚಕ್ಕುಲಿ,ಉಂಡೆ ಮತ್ತಿತರ ಇತರ ಸಿಹಿ ಪದಾರ್ಥಗಳನ್ನು ಈ ಕಮಾನುಗಳಿಗೆ ತೂಗು ಹಾಕಲಾಗಿದೆ.

    ಮೆರವಣಿಗೆಯಲ್ಲಿ ಬರುವ ಸಾಹಸಿ ಯುವಕರ ತಂಡ ಇದನ್ನು ಹೊಡೆದುಕೊಂಡು ಬರುತ್ತಾರೆ. ವಿದ್ಯುತ್ ಬೆಳಕಿನ ಅಲಂಕಾರದಲ್ಲಿ ಈ ಗಡಿಗೆ ಒಡೆಯುವ ದ್ರಶ್ಯ ನೋಡುವುದೇ ಕಣ್ಣಿಗೆ ಹಬ್ಬ ಇದರೊಂದಿಗೆ ಕದ್ರಿ ಕ್ರಿಕೆಟರ್ಸ್‌ ವತಿಯಿಂದ ಕದ್ರಿ ಮೈದಾನದಲ್ಲಿ ಪಾಲಿಕೆ ವತಿಯಿಂದ ವಿರ್ಮಾಣಮಾಡಿದ ನೂತನ ಬಯಲು ರಂಗ ಮಂದಿರಲ್ಲಿ ಬಹು ತಾರೆಯರ ಸಮಕ್ಷಮದಲ್ಲಿ ರಸಸಂಜೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.
    ಕಾರ್ಯಕ್ರಮ ಹೇಗೆ ನಡೆಯುತ್ತದೆ ?
    ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸಂಜೆ ಶ್ರೀ ಗೋಪಾಲಕೃಷ್ಣ ಮಠದಿಂದ ಭವ್ಯಾಲಂಕೃತ ಮಂಟಪದಲ್ಲಿ ಶ್ರೀಕೃಷ್ಣನ ಭಜನೆ, ವಿದ್ಯುದೀಪಾಂಕೃತವಾದ ಸ್ತಬ್ಧ ಚಿತ್ರಗಳು, ವಾದ್ಯವೃಂದ, ದಾಂಡಿಯಾ ನೃತ್ಯ, ಚೆಂಡೆ, ಬೊಂಬೆಕುಣಿತಗಳು, ವಿವಿಧ ವೇಷಗಳು, ಆಕರ್ಷಕ ಸುಡುಮದ್ದುಗಳ ಪ್ರದರ್ಶನ ದೊಂದಿಗೆ ಮೆರವಚಣಿಗೆ ಆರಂಭವಾಗಲಿದೆ.

    ಈ ಮೆರವಣಿಗೆ ಮೊಸರುಕುಡಿಕೆ ತಂಡದೊಂದಿಗೆ ಹೊರಟು ಕದ್ರಿಕಂಬಳ ರಸ್ತೆ, ಮಲ್ಲಿಕಟ್ಟೆ, ಮೂಲಕ ಸಾಗಿ ಕದ್ರಿ ದೇವಾಲಯದ ರಾಜಾಂಗಣವನ್ನು ತಲುಪಲಿದೆ. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪರಿಣತ ಸಾಹಸಿ ಯುವಕರ ತಂಡ ಗಡಿಗೆಗಳನ್ನು ಒಡೆಯುತ್ತಾ ಸಾಗುತ್ತಾರೆ. ಸಾವಿರಾರು ಜನ ರಸ್ತೆ ಉದ್ದಕ್ಕೂ ನಿಂತು ಈ ಸಂಭ್ರಮವನ್ನು ಆನಂದಿಸುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply