LATEST NEWS
ಹಂಪನಕಟ್ಟೆ ಬಳಿ ನೈತಿಕ ಪೊಲೀಸ್ ಗಿರಿ – ಮೂವರು ಅರೆಸ್ಟ್

ಮಂಗಳೂರು ಡಿಸೆಂಬರ್ 23: ಹಂಪನಕಟ್ಟೆ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಬಂಟ್ವಾಳ ನಿವಾಸಿ ಸಂದೇಶ್ (28), ಆತನ ಸಹಚರರಾದ ಪ್ರಶಾಂತ್ (31) ಮತ್ತು ರೋನಿತ್ (31 ವರ್ಷ) ಎಂದು ಗುರುತಿಸಲಾಗಿದೆ.
ಡಿಸೆಂಬರ್ 21 ರಂದು ಅನ್ಯಕೋಮಿನ ಜೋಡಿಯೊಂದು ಜೊತೆಯಾಗಿ ನಿಂತಿರುವುದನ್ನು ಗಮನಿಸಿ ಈ ಮೂವರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರು ಆಟೋ ಒಂದನ್ನು ಹತ್ತಿ ಹೋಗಲು ಪ್ರಯತ್ನಿಸಿದ ವೇಳೆ ಆಟೋ ತಡೆದು ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆಟೋ ಚಾಲಕನ ದೂರಿನ ಮೇರೆಗೆ ಉತ್ತರ ಪಿಎಸ್ ಐ ಅಪರಾಧ ಕ್ರಮಾಂಕ 148/2023 ಯು/ಸೆ 341, 504 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, , ತನಿಖೆ ಮುಂದುವರೆದಿದೆ.
