Connect with us

    LATEST NEWS

    ನೈತಿಕ ಪೊಲೀಸ್ ಗಿರಿ ನಾಲ್ವರು ಭಜರಂಗದಳ ಕಾರ್ಯಕರ್ತರ ಆರೆಸ್ಟ್

    ಮಂಗಳೂರು ಎಪ್ರಿಲ್ 3: ಗುರುವಾರ ರಾತ್ರಿ ಖಾಸಗಿ ಬಸ್ ನಲ್ಲಿ ತೆರಳುತ್ತಿದ್ದ ಅನ್ಯಕೋಮಿನ ಜೋಡಿಗಳನ್ನು ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದ್ದ ನಾಲ್ವರು ಭಜರಂಗದಳದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.


    ಬಂಧಿತ ಆರೋಪಿಗಳನ್ನು ಮಂಗಳೂರಿನ ಅತ್ತಾವರದ ಬಾಲಚಂದ್ರ (28), ಕಂದುಕದ ಧನುಷ್ ಭಂಡಾರಿ (25), ಶಕ್ತಿನಗರದ ಜಯಪ್ರಶಾಂತ್ (27) ಮತ್ತು ಉರ್ವಮಾರಿಗುಡಿ ಕ್ರಾಸ್ ರೋಡ್ ಬಳಿಯ ಅನಿಲ್ ಕುಮಾರ್ (27) ಎಂದು ಗುರುತಿಸಲಾಗಿದ್ದು, ಆರೋಪಿಗಳ ಮೇಲೆ ಈಗಾಗಲೇ ನಗರದ ವಿವಿಧ ಠಾಣೆಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.


    ಮಂಗಳೂರು ಕೆಎಸ್​ಆರ್​​ಟಿಸಿ ಬಸ್ ನಿಲ್ದಾಣದ ಬಳಿಯಿಂದ ಹೊರಟ ಖಾಸಗಿ ಬಸ್​ನಲ್ಲಿ ಭಿನ್ನ ಕೋಮಿನ ಯುವಕ ಮತ್ತು ಯುವತಿ ಜೊತೆಯಾಗಿ ಪ್ರಯಾಣಿಸುತ್ತಿರುವ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ನಗರದ ಪಂಪ್ವೆ​ಲ್​ ಬಳಿ ಬಸ್ ತಡೆದು ಇಬ್ಬರನ್ನೂ ಬಸ್​​ನಿಂ​​ದ ಕೆಳಗಿಳಿಸಿ ಹಲ್ಲೆ ನಡೆಸಿದ್ದರು. ಈ ವೇಳೆ ಯುವಕನಿಗೆ ಚೂರಿಯಿಂದ ಇರಿಯಲಾಗಿದ್ದು, ಆತನನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply