LATEST NEWS
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ,ತಣ್ಣೀರುಬಾವಿ ಬೀಚ್ ಬಳಿ ಘಟನೆ: ಗಾಯಳುಗಳು ಆಸ್ಪತ್ರೆಗೆ ದಾಖಲು

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ,ತಣ್ಣೀರುಬಾವಿ ಬೀಚ್ ಬಳಿ ಘಟನೆ: ಗಾಯಳುಗಳು ಆಸ್ಪತ್ರೆಗೆ ದಾಖಲು
ಮಂಗಳೂರು, ಮಾರ್ಚ್ 25 : ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದೆ.
ಮಂಗಳೂರಿನ ತಣ್ಣೀರುಬಾವಿ ಬೀಚ್ ಬಳಿ ಬರ್ತ್ ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ತಣ್ಣೀರುಬಾವಿಯ ಫಾತಿಮಾ ಚರ್ಚ್ ಬಳಿ ನಿನ್ನೆ ಸಂಜೆ ಘಟನೆ ನಡೆದಿದೆ.
ನಿನ್ನೆ ಸಂಜೆ ತಣ್ಣೀರುಬಾವಿಗೆ ಬರ್ತ್ ಡೇ ಆಚರಿಸಲು ಬಂದಿದ್ದ ಸಬಿತ್, ಸಮೀರ್ ಮತ್ತು ನಿತೇಶ್ ಎಂಬ ಮೂವರು ವಿದ್ಯಾರ್ಥಿಗಳಿಗೆ ಹಿಂದೂ ಸಂಘಟನೆಯ ಐವರು ಕಾರ್ಯಕರ್ತರು ಫಾತಿಮಾ ಚರ್ಚ್ ಬಳಿ ಥಳಿಸಿದ್ದಾರೆ.
ಇನ್ನು ಹಲ್ಲೆ ಮಾಡಿಯೂ ಸುಮ್ಮನಾಗದ ಹಿಂದೂ ಪರ ಕಾರ್ಯಕರ್ತರು ವಿದ್ಯಾರ್ಥಿಗಳ ಮೊಬೈಲ್ ಕಿತ್ತುಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಆದರೆ, ವಿದ್ಯಾರ್ಥಿಗಳ ಜತೆಗಿದ್ದ ವಿದ್ಯಾರ್ಥಿನಿಯರು ಕ್ರೈಸ್ತರೆಂದು ತಿಳಿದ ಬಳಿಕ ಹಿಂದೂ ಪರ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಐವರು ಯುವಕರ ತಂಡ ಈ ಕುಕೃತ್ಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಯುವಕರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಿರಿಯ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಲ್ಲೆ ಮಾಡಿದವರನ್ನು ಸ್ಥಳೀಯರಾದ ಸುಖೇಶ್, ವರುಣ್, ಹಾಗೂ ದೀಕ್ಷೀತ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಪಣಂಬೂರು ಪೋಲಿಸರು.
ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋಗಾಗಿ…