Connect with us

    LATEST NEWS

    ಮುಂಗಾರು ಅವಧಿಯಲ್ಲಿ ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ನಿಂದ ಸುರಕ್ಷತಾ ಕ್ರಮಗಳ ಮಾಹಿತಿ

    ಮಂಗಳೂರು, ಮೇ.24:- ಪ್ರಸ್ತುತ ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ, ಬಳಕೆದಾರರು ವಿದ್ಯುತ್ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮುನ್ನಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.


    ಸುರಕ್ಷತಾ ಕ್ರಮಗಳು : 

    ತುಂಡಾದ ಅಥವಾ ಇನ್ಸುಲೇಷನ್ ಇಲ್ಲದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ವಿದ್ಯುತ್ ಕಂಬಗಳನ್ನು ಹತ್ತಬಾರದು ಮತ್ತು ದುರಸ್ತಿ ಕಾರ್ಯ ಮಾಡುವುದು ಅಪಾಯಕಾರಿ, ವಿದ್ಯುತ್ ಉಪಕರಣಗಳನ್ನು ಪರಿಣಿತರಿಂದ ದುರಸ್ತಿಗೊಳಿಸಬೇಕು, ವಿದ್ಯುತ್ ಸ್ವಿಚ್ ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು, ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರದ ರೆಂಬೆಗಳನ್ನು ತೆಗೆಯಲು ಪ್ರಯತ್ನಿಸಬಾರದು ಇಂತಹ ಸಂದರ್ಭದಲ್ಲಿ ಕೂಡಲೇ ಸ್ಥಳೀಯ ಮೆಸ್ಕಾಂ ಕಚೇರಿಗೆ ಅಥವಾ ಮೆಸ್ಕಾಂ ಲೈನ್ ಮ್ಯಾನ್ ಗಳಿಗೆ ತಿಳಿಸಬೇಕು. ತುಂಡಾದ ಅಥವಾ ಇನ್ಸುಲೇಷನ್ ಇಲ್ಲದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ವಿದ್ಯುತ್ ತಂತಿಗಳ ಸಮೀಪ ಆಟ ಆಡಬಾರದು. ವಿದ್ಯುತ್ ತಂತಿಗಳ ಸನಿಹದಲ್ಲಿ ಬಟ್ಟೆಗಳನ್ನು ಒಣಗಲು ಹಾಕಬಾರದು ಮತ್ತು ಟ್ರಾನ್ಸಫಾರ್ಮರ್ ಸುತ್ತಲಿನ ತಂತಿ ಬೇಲಿ ಮುಟ್ಟಬಾರದು, ಒಂದೇ ಸಕ್ರ್ಯೂಟ್ ಗೆ ಹಲವಾರು ಉಪಕರಣಗಳನ್ನು ಜೋಡಿಸಬಾರದು, ಸ್ವಿಚ್ ಬೋರ್ಡ್‍ಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಬೇಕು. ಇಲೆಕ್ಟ್ರಿಕಲ್ ಉಪಕರಣಗಳ, ಸಾಕೆಟ್ ಗಳ ಹತ್ತಿರ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಸಾಮಾಗ್ರಿಗಳನ್ನು ಇಡಬಾರದು. ಹಾಗೂ ನೀರು ಕಾಯಿಸಲು ತೆರೆದ ಕಾಯಿಲ್ ಬಳಸಬಾರದು.

     

    ವಿದ್ಯುತ್ ಲೈನ್‍ಗಳ ಕೆಳಗೆ ಸರಕು ಸಾಗಾಣಿಕೆ ಸಮಯದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕಟ್ಟಡ ಕಾಮಗಾರಿಯ ವೇಳೆಯಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವಾಗ ವಿದ್ಯುತ್ ಲೈನ್ ಗೆ ತಾಗದಂತೆ ಎಚ್ಚರವಹಿಸಬೇಕು. ಸಾಕು ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ ಅಥವಾ ತಂತಿಗಳಿಗೆ ಕಟ್ಟಬಾರದು. ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬಾರದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬಾರದು, ವಿದ್ಯುತ್ ಮಾರ್ಗದ ಕೆಳಗೆ ಅಥವಾ ಪಕ್ಕದಲ್ಲಿರುವ ಕೊಳವೆ ಬಾವಿ ದುರಸ್ತಿ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಮಸ್ಕಾಂ ಕಚೇರಿಗೆ ಮಾಹಿತಿ ನೀಡಬೇಕು. ಐಎಸ್‍ಐ ಗುರುತನ್ನು ಹೊಂದಿರುವ ವಿದ್ಯುತ್ ಉಪಕರಣಗಳನ್ನು ಬಳಸಬೇಕು, ಕಟ್ಟಡ ನಿರ್ಮಾಣ ಮಾಡುವ ನಿಯಮಗಳ ಪ್ರಕಾರ ವಿದ್ಯುತ್ ಮಾರ್ಗ ಹಾಗೂ ಕಟ್ಟಡದ ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕು, 3ನೇ ಪಿನ್ ಅತಿರ್ಂಗ್ ಆಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು, ವಿದ್ಯುತ್ ಉಪಕರಣಗಳನ್ನು ಸುರಕ್ಷತೆಗಾಗಿ ನಿಯತಕಾಲಿಕವಾಗಿ ಪರೀಕ್ಷಿಸಿಕೊಳ್ಳಬೇಕು. ತೋಟಗಳಲ್ಲಿ ಅಲ್ಯುಮಿನಿಯಂ ಏಣಿಗಳನ್ನು ಹಾಗೂ ಕೋಲುಗಳನ್ನು ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

     

    ಮಳೆಗಾಲದ ಸಂದರ್ಭಗಳಲ್ಲಿ ಮೆಸ್ಕಾಂ ಕಂಬಗಳನ್ನು, ತಂತಿಗಳನ್ನು ಮತ್ತು ಪರಿವರ್ತಕಗಳನ್ನು ಸಾರ್ವಜನಿಕರು ಮುಟ್ಟವುದು ಜೀವಕ್ಕೆ ಅಪಾಯಕಾರಿ. ವಿದ್ಯುತ್ ಲೈನ್ ಗಳಲ್ಲಿ ಬೆಂಕಿ ಕಿಡಿ ಬರುತ್ತಿರುವ ಸಂದರ್ಭಗಳಲ್ಲಿ ಮೆಸ್ಕಾಂ ಕಚೇರಿಗಳಿಗೆ ಮಾಹಿತಿ ನೀಡುವುದರಿಂದ ಗ್ರಾಹಕರು ಸ್ವತಹಃ ದುರಸ್ಥಿಗೆ ಮುಂದಾಗಬಹುದು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಮೆಸ್ಕಾಂನ ಉಚಿತ ದೂರವಾಣಿ ಸಂಖ್ಯೆ: 1912 ಗೆ ಕರೆ ಮಾಡಬಹುದು ಅಥವಾ ಗ್ರಾಹಕರ ಸೇವಾ ಕೇಂದ್ರದ ವಾಟ್ಸ್ ಆಪ್ ನಂಬರ್ 9483041912 ಗೆ ಸಂದೇಶ ಕಳುಹಿಸಬಹುದು ಅಥವಾ ʼʼನನ್ನ ಮೆಸ್ಕಾಂʼʼ ಆ್ಯಪ್ ನ ಮೂಲಕ ಮಾಹಿತಿ ನೀಡಬಹುದು ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *