Connect with us

LATEST NEWS

ಉಡುಪಿ : ಹಣ ಡಬಲ್ ಮಾಡುವುದಾಗಿ ಹೇಳಿ ವಂಚನೆ

ಉಡುಪಿ ಡಿಸೆಂಬರ್ 7: ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಡಬಲ್ ಆಗುವುದೆಂದು ಹೇಳಿ ವಂಚಕರು ₹ 78,500 ಪಡೆದು ಮೋಸ ಮಾಡಿದ್ದಾರೆ. ಅನುಷ್‌ ರವಿಶಂಕರ್‌ ವಂಚನೆಗೊಳಗಾದವರು.

ಈಚೆಗೆ ಕರೆ ಮಾಡಿದ ವಂಚಕರು ಮ್ಯೂಚುವಲ್ ಫಂಡ್ ಟ್ರೇಡಿಂಗ್ ಬಗ್ಗೆ ತಿಳಿಸಿ, ಹಣ ದ್ವಿಗುಣದ ಆಸೆ ತೋರಿಸಿ ಗೂಗಲ್‌ ಪೇ ಮೂಲಕ ₹ 13,500 ಹಣವನ್ನು ಹಂತ ಹಂತವಾಗಿ ಪಡೆದಿದ್ದಾರೆ. ಬಳಿಕ ಸೆಕ್ಯೂರಿಟಿ ಡೆಪಾಸಿಟ್, ಫಿಕ್ಸ್ ಡೆಪಾಸಿಟ್, ರಿಫಂಡ್ ಸೆಕ್ಯುರಿಟಿ ಡೆಪಾಸಿಟ್‌ ಹೆಸರಿನಲ್ಲಿ ₹ 65,000 ಹಣ ಪಡೆದಿದ್ದಾರೆ. ಬಳಿಕ ಅನುಷ್‌ಗೆ ವಂಚನೆಗೆ ಸಿಲುಕಿರುವುದು ಅರಿವಿಗೆ ಬಂದಿದೆ. ಉಡುಪಿಯ ಸೆನ್ ಠಾಣೆಯಲ್ಲಿ ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement
Click to comment

You must be logged in to post a comment Login

Leave a Reply