LATEST NEWS
ಪ್ರಯಾಗ್ ರಾಜ್ ಮಹಾಕುಂಭ ಮೇಳದ ವೈರಲ್ ಬೆಡಗಿ ಮೊನಾಲಿಸಾ…!!
ಪ್ರಯಾಗ್ ರಾಜ್ ಜನವರಿ 19; ಪ್ರಯಾಗರಾಜ್ ನಲ್ಲಿ ಮಹಾಕುಂಭ ಮೇಳೆ, ಈ ಮಹಾಕುಂಭ ಮೇಳದಲ್ಲಿ ವಿಶೇಷ ರೀತಿಯ ಸಾಧು ಸಂತರು ಕಾಣ ಸಿಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕುಂಭಮೇಳಕ್ಕೆ ಸಂಬಂಧಿಸಿದಂತೆ ವಿವಿಧ ವಿಡಿಯೋಗಳು ವೈರಲ್ ಆಗುತ್ತಿದೆ. ಈ ನಡುವೆ ಕಂದು ಮೈಬಣ್ಣ, ಆಕರ್ಷಕ ಕಣ್ಣುಗಳು, ಮುಗ್ಧ ನಗುವಿನ ಮೂಲಕ ಎಲ್ಲರನ್ನು ಯುವತಿಯೊಬ್ಬಳು ಸೇಳೆಯುತ್ತಿದ್ದಾಳೆ, ಆಕೆಯ ಹೆಸರು ಮೊನಾಲಿಸಾ…!! ಮಧ್ಯಪ್ರದೇಶದ ಇಂದೋರ್‌ನಿಂದ ಬಂದಿರುವ ಈಕೆ ಮಹಾ ಕುಂಭಮೇಳದಲ್ಲಿ ಜಪಮಾಲೆಗಳನ್ನು ಮಾರುತ್ತಾಳೆ.
ಕಣ್ಣು ಹಾಯಿಸಿದಷ್ಟೂ ಭಕ್ತ ಸಾಗರ, ಸಾಧು-ಸಂತರು, ನಾಗಾ ಸಾಧುಗಳ ಸೇರಿದಂತೆ ಲಕ್ಷಾಂತರ ಭಕ್ತರು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸಾಕ್ಷಿಯಾಗಿದ್ದಾರೆ. ಜನವರಿ 13ರಂದು ಮಹಾ ಕುಂಭ ಮೇಳಕ್ಕೆ ಚಾಲನೆ ಸಿಕ್ಕಿದೆ. 12 ವರ್ಷಗಳ ಬಳಿಕ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ದೇಶ-ವಿದೇಶಗಳಿಂದಲೂ ಭಕ್ತರ ದಂಡು ಹರಿದು ಬರುತ್ತಿದೆ. ಮಹಾ ಕುಂಭಮೇಳದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ.
ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ಮತ್ತೊಂದು ವಿಡಿಯೋ. ಫೇಸ್ಬುಕ್, ಟ್ವಿಟರ್ ಇನ್ಸ್ಟಾಗ್ರಾಂ.. ಹೀಗೆ ಯಾವುದೇ ಸಾಮಾಜಿಕ ಪುಟಗಳನ್ನು ತೆರೆದರೂ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಸರ ಮಾರುವ ಯುವತಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದೇ ಮಾತು. ಆಕೆಯ ಸೌಂದರ್ಯವನ್ನು ಹೊಗಳುವವರು ಒಂದು ಕಡೆಯಾದರೆ, ಅವಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುವವರು ಇನ್ನೊಂದು ಕಡೆ. ಹೌದು…. ಕುಂಭಮೇಳದಲ್ಲಿ ರುದ್ರಾಕ್ಷಿ, ಜಪಮಾಲೆ ಸೇರಿದಂತೆ ನಾನಾ ರೀತಿಯ ಸರಗಳನ್ನು ಮಾರುತ್ತಿರುವ ಈ ಹುಡುಗಿಯ ವಿಡಿಯೊವೊಂದನ್ನು ಇನ್‌ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊಗೆ ಸುಮಾರು 1 ಮಿಲಿಯನ್ ವರೆಗೆ ಲೈಕ್ಸ್ ಬಂದಿದ್ದು, ಹಲವು ಶೇರ್ ಕಂಡಿತ್ತು. ಆಕೆಯ ಸರಳ ಸೌಂದರ್ಯವನ್ನು ಮೆಚ್ಚಿರುವ ನೆಟ್ಟಿಗರು ‘ಮಹಾ ಕುಂಭಮೇಳದ ಮೊನಲಿಸಾ’ ಎಂದು ಕರೆದಿದ್ದಾರೆ.
ಇದೇ ಮೊದಲ ಬಾರಿಗೆ ಕುಂಭ ಮೇಳಕ್ಕೆ ಬಂದಿರುವ ಈಕೆಯನ್ನು ಹಾಲಿವುಡ್ನ ನಟಿ ಏಂಜೆಲಿನಾ ಜೋಲಿಗೆ ಹೋಲಿಸಿದ್ದಾರೆ. ಅಲ್ಲದೆ, ಕ್ರಷ್ ಆಫ್ ಇಂಡಿಯಾ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಮುದ್ದು ಮತ್ತು ಮುಗ್ದ ಯುವತಿ ವಿಡಿಯೋಗಳು ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತಿವೆ.