FILM
ಮಲೆಯಾಳಂ ಚಿತ್ರರಂಗದ ಲೈಂಗಿಕ ಹಗರಣ – ಅಮ್ಮ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ
ತಿರುವನಂತಪುರಂ ಅಗಸ್ಟ್ 27: ಹೇಮಾ ಕಮಿಟಿ ವರದಿಯ ನಂತರ ಮಲೆಯಾಳಂ ಚಿತ್ರರಂಗದಲ್ಲಿ ಎಬ್ಬಿರುವ ಬಿರುಗಾಳಿಗೆ ಇದೀಗ ಮತ್ತೊಂದು ವಿಕೆಟ್ ಬಿದ್ದಿದು, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಸೂಪರ್ ಸ್ಟಾರ್ ಮೋಹನ್ ಲಾಲ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು.
ಹೇಮಾ ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಈಗಾಗಲೇ ಹಲವು ಪ್ರಮುಖ ನಟರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿದೆ. ಹಲವು ನಟಿಯರು ತಾವು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಇದೀಗ ಎಲ್ಲಾ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನಲೆ ಈಗಾಗಲೇ ಲೈಂಗಿಕ ಕಿರುಕುಳದ ಆರೋಪದ ನಂತರ ನಟ ಸಿದ್ದೀಕ್ ಹುದ್ದೆ ತೊರೆದ ನಂತರ ಜಗದೀಶ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುತ್ತಿರುವಾಗಲೇ ಈ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಅಸೋಸಿಯೇಷನ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅದರ ಕೆಲವು ಸದಸ್ಯರು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸಿದ ನಂತರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಕಾರ್ಯಕಾರಿ ಸಮಿತಿಯು ಹೀಗೆ ಹೇಳಿದೆ: “ಹೇಮಾ ಸಮಿತಿಯ ವರದಿಯ ಬಿಡುಗಡೆ ಮತ್ತು ನಂತರದ ಸಾಮಾಜಿಕ, ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಅಮ್ಮನ ಕಾರ್ಯಕಾರಿ ಸಮಿತಿಯ ಕೆಲವು ಪದಾಧಿಕಾರಿಗಳು ಎದುರಿಸಿದ ಆರೋಪಗಳನ್ನು ಅನುಸರಿಸಿ, ಪ್ರಸ್ತುತ ಕಾರ್ಯಕಾರಿ ಸಮಿತಿ AMMA ತನ್ನ ನೈತಿಕ ಹೊಣೆಗಾರಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದೆ.
ಎರಡು ತಿಂಗಳಿನಲ್ಲಿ ಸಾಮಾನ್ಯ ಸಂಸ್ಥೆಯು ನೂತನ ಮಂಡಳಿಯನ್ನು ಆಯ್ಕೆ ಸಭೆ ಮಾಡಲಾಗುವುದು ಎಂದು ಪ್ರಕಟನೆಯಾಗಿದೆ. ಅಲ್ಲಿಯವರೆಗೆ, ಸದಸ್ಯರಿಗೆ ವಿವಿಧ ಕಲ್ಯಾಣ ಕ್ರಮಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಚೇರಿ ವಿಷಯಗಳನ್ನು ಸಮನ್ವಯಗೊಳಿಸಲು ಪ್ರಸ್ತುತ ಆಡಳಿತ ಮಂಡಳಿಯು ತಾತ್ಕಾಲಿಕ ವ್ಯವಸ್ಥೆಯಾಗಿ ಮುಂದುವರಿಯುತ್ತದೆ. ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.