LATEST NEWS
ರಾಜಕಾರಣಿಗಳು ಕೊರೊನಾ ವಾರಿಯರ್ಸ್ ಅಲ್ಲ..ಅವರಿಗೆ ಮೂರನೇ ಹಂತದಲ್ಲಿ ಲಸಿಕೆ – ಮೋದಿ
ನವದೆಹಲಿ ಜನವರಿ 11: ರಾಜಕಾರಣಿಗಳು ಕೊರೊನಾ ವಾರಿಯರ್ಸ್ ಅಲ್ಲ ಅವರಿಗೆ ಮೂರನೆ ಹಂತದಲ್ಲಿ ಮಾತ್ರ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಜನವರಿ 16ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಲಸಿಕೆ ವಿತರಣೆಯು ಮಾರ್ಗಸೂಚಿಯ ಅನ್ವಯವೇ ನಡೆಯಲಿದೆ. ರಾಜಕಾರಣಿಗಳು ಕೊರೊನಾ ವಾರಿಯರ್ಸ್ ಅಲ್ಲ. ಅವರಿಗೆ ನಂತರದ ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.ಇಂದು ದೇಶದ ಇತಿಹಾಸದಲ್ಲೇ ಹೆಮ್ಮೆಯ ದಿನ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಮತ್ತು ಮೂರನೇ ಹಂತದಲ್ಲಿ ಜನಸಾಮಾನ್ಯರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಲಸಿಕೆಯನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
Facebook Comments
You may like
-
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯ ಆರಂಭ
-
ಕೊರೊನಾ ಲಸಿಕೆ ಬಡಪಾಯಿಗಳ ಬದಲು ಮೊದಲು ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ನೀಡಿ – ಮಾಜಿ ಆರೋಗ್ಯ ಸಚಿವರ ಸಲಹೆ
-
ಲಾಕ್ಡೌನ್ ನಂತರ ಮೊದಲ ಬಾರಿಗೆ ‘ಹೌಸ್ಫುಲ್’ ಆದ ಮಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್ಗಳು
-
ಕೊರೊನಾ ಲಸಿಕೆ ವಿಚಾರದಲ್ಲೂ ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ
-
ಇವರ ಮಧ್ಯ ಕುಳಿತುಕೊಳ್ಳಲು ಕೊರೋನಾಕ್ಕೂ ಜಾಗ ಇಲ್ಲ….!!
-
ದೇಶದ ವಿವಿಧ ರಾಜ್ಯಗಳತ್ತ ಹೊರಟ ಕೊರೊನಾ ಲಸಿಕೆ ಹೊತ್ತ ಟ್ರಕ್ ಗಳು…!!
You must be logged in to post a comment Login