Connect with us

FILM

ಬಾಹುಬಲಿ ದಾಖಲೆ ಮುರಿದ ಕೆಜಿಎಫ್ ಚಾಪ್ಟರ್ 2

ಬೆಂಗಳೂರು, ಜನವರಿ 12: ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ದಕ್ಷಿಣ ಭಾರತದ ಪಾಲಿಗೆ ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಟೀಸರ್ ಅಥವಾ ಟ್ರೈಲರ್ ಕೆಜಿಎಫ್ ಎನಿಸಿಕೊಂಡಿದೆ.

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಎಂಬ ದಾಖಲೆ ಬರೆದಿದ್ದು ಬಾಹುಬಲಿ. ಈ ಪಟ್ಟಿಯಲ್ಲಿ ಬಾಹುಬಲಿ ಮೊದಲ ಸ್ಥಾನದಲ್ಲಿತ್ತು. ಬಾಹುಬಲಿ ತೆಲುಗು ಟ್ರೈಲರ್ 64 ಮಿಲಿಯನ್ (64,121,750) ವೀಕ್ಷಣೆ ಕಂಡಿದೆ. ಆದ್ರೀಗ, ಕೆಜಿಎಫ್ ಟೀಸರ್ 2 ಟೀಸರ್ 133 ಮಿಲಿಯನ್ (133,748,761) ವೀಕ್ಷಣೆ ಕಂಡಿದೆ.

ಭಾರತೀಯ ಚಿತ್ರರಂಗದಲ್ಲೂ ಕೆಜಿಎಫ್ ಟೀಸರ್ ಇತಿಹಾಸ ಸೃಷ್ಟಿಸಿದೆ. ಅತಿ ಹೆಚ್ಚು ವೀಕ್ಷಣೆ ಕಂಡ ಭಾರತದ ಮೊದಲ ಟೀಸರ್ ಅಥವಾ ಟ್ರೈಲರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಭಾರತದಲ್ಲಿ ಇದುವರೆಗೂ ಬಾಹುಬಲಿ 2 ಹಿಂದಿ ವರ್ಷನ್ ಟ್ರೈಲರ್ ಹೆಚ್ಚು ವೀಕ್ಷಣೆ ಕಂಡಿತ್ತು. ಬಾಹುಬಲಿ ಹಿಂದಿ ಟ್ರೈಲರ್ 118 ಮಿಲಿಯನ್ (118,160,358) ವೀಕ್ಷಣೆ ಕಂಡಿದೆ. ಈ ರೆಕಾರ್ಡ್ ಬ್ರೇಕ್ ಮಾಡಿರುವ ಕೆಜಿಎಫ್ ಟೀಸರ್ 133 ಮಿಲಿಯನ್ ವೀಕ್ಷಣೆ ಕಂಡಿದೆ.

ಯ್ಯೂಟ್ಯೂಬ್ ಪಾಲಿಗೆ ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಎಂಬ ದಾಖಲೆ ಈಗ ಕೆಜಿಎಫ್ ಟೀಸರ್ ಹೆಸರಿನಲ್ಲಿದೆ.