Connect with us

LATEST NEWS

ದೇವೇಗೌಡರಿಗೆ ಮಾಡಿದ ಅವಮಾನಕ್ಕೆ ನೀವು ಪರದಾಡುವಂತಾಗುತ್ತದೆ – ನರೇಂದ್ರ ಮೋದಿ

ದೇವೇಗೌಡರಿಗೆ ಮಾಡಿದ ಅವಮಾನಕ್ಕೆ ನೀವು ಪರದಾಡುವಂತಾಗುತ್ತದೆ – ನರೇಂದ್ರ ಮೋದಿ

ಉಡುಪಿ ಮೇ 1: ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಗುಣಗಾನ ಮಾಡಿದ್ದು ಈಗ ಭಾರಿ ಸುದ್ದಿಯಾಗಿದೆ.

ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ನಡೆದ ಚುನಾವಣಾ ಸಮಾವೇಶದಲ್ಲಿ ದೇವೇಗೌಡರ ವಿರುದ್ದ ಹರಿಹಾಯ್ದಿದಿದ್ದರು. ಈ ಬಗ್ಗೆ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇವೇಗೌಡರಿಗೆ ಅವಮಾನ ಮಾಡಿರುವುದು ನಿಮ್ಮ ಜೀವನದ ಪ್ರಾರಂಭದಲ್ಲಿ ಮಾಡಿರುವ ತಪ್ಪು. ಮುಂದಿನ ದಿನಗಳಲ್ಲಿ ನೀವು ಪರದಾಡುವಂತಾಗುತ್ತದೆ. ಇದಕ್ಕೆ ಕಾರಣ ಏನು ಎಂದು ಆಗ ನಿಮಗೆ ಅರ್ಥವಾಗಲಿದೆ ಎಂದರು.

ಸಮಾವೇಶದಲ್ಲಿ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯದಲ್ಲಿ ಅವರು ನಮ್ಮ ವಿರೋಧಿಯಾಗಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಅವರು ನಮ್ಮ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷರು ದೇವೇಗೌಡರನ್ನು ಟೀಕಿಸಿದ್ದು ಎಷ್ಟು ಸರಿ? ಇದು ರಾಜಕೀಯ ಸಂಸ್ಕಾರವೇ ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡರು ವರಿಷ್ಠ ನಾಯಕರಲ್ಲಿ ಒಬ್ಬರು. ಅವರ ಬಗ್ಗೆ ಕೀಳಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ನಮಗೆ ರಾಜಕೀಯವಾಗಿ ಅವರೊಂದಿಗೆ ವಿರೋಧ ಇರಬಹುದು. ಆದರೆ ದೇವೇಗೌಡರು ಹೇಳಿದಾಗಲೆಲ್ಲಾ ನಾನು ಭೇಟಿ ಮಾಡಿದ್ದೇನೆ. ಮನೆಗೆ ಬಂದಾಗ ನಾನೇ ಮನೆಬಾಗಿಲಿಗೆ ಬಂದು ಸ್ವಾಗತಿಸಿದ್ದೇನೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಮೋದಿ ಭಾಷಣದ ಸಾರಾಂಶ

ಸಾರ್ವಜನಿಕ ಜೀವನದಲ್ಲಿ ಗೌರವ ಎನ್ನುವುದು ಇರುತ್ತದೆ. ಪ್ರತಿ ವ್ಯಕ್ತಿಗೆ ಅಹಂ ಎನ್ನುವುದು ಇರುತ್ತದೆ. ಸಾಮಾಜಿಕ ಜೀವನದಲ್ಲಿ ಮಾನ, ಮರ್ಯಾದೆ ಎನ್ನುವುದು ಅಮೂಲ್ಯವಾಗಿದೆ. ನಮ್ಮ ದೇಶ ಕಂಡ ಪ್ರಧಾನಿಗಳಲ್ಲಿ ಒಬ್ಬರಾದ ಹಾಗೂ ಈ ಮಣ್ಣಿನ ಮಗ ದೇವೇಗೌಡ ಅವರು ಯಾವುದೇ ಸಂದರ್ಭದಲ್ಲಿಯೂ ದೆಹಲಿ ಬಂದರು ನಾನು ಅವರಿಗಾಗಿ ಸಮಯ ಮೀಸಲಿಟ್ಟಿದ್ದೇನೆ. ಅವರು ಒಂದು ವೇಳೆ ನಮ್ಮ ನಮಗೆ ಬಂದರೆ ಅವರ ಗಾಡಿಯ ಬಾಗಿಲು ತೆರೆದು ಸ್ವಾಗತಿಸುತ್ತೇನೆ. ಅವರು ಹೊರಟರೆ ಗಾಡಿಯವರೆಗೆ ಹೋಗಿ ಬಿಟ್ಟು ಬರುತ್ತೇನೆ.

ಇಂದು ರಾಜತಾಂತ್ರಿಕ ವಿಚಾರದಿಂದ ಹೊರತಾಗಿರುವುದು. ಆದರೆ, ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರು ಹದಿನೈದು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ದೇವೇಗೌಡ ಅವರನ್ನು ಅವಮಾನ ಮಾಡಿದ್ದಾರೆ.ಈಗ ಬೆಳವಣಿಗೆಯ ಹಂತದಲ್ಲಿರುವ ನೀವು ಈ ರೀತಿಯಾಗಿ ಮಾತನಾಡಿದ್ದು ಸಂಸ್ಕಾರವೇ? ಆದರೆ ದೇವೇಗೌಡರು ಅವರು ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.

ರಾಹುಲ್ ಗಾಂಧಿ ತಮ್ಮ ಪ್ರಚಾರ ಭಾಷಣದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕರೆದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ನರೇಂದ್ರ ಮೋದಿ ಉಡುಪಿಯಲ್ಲಿ ದೇವೇಗೌಡರನ್ನು ಹೊಗಳಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *