Connect with us

LATEST NEWS

ಕಾಂಗ್ರೇಸ್ ನ ಉದಾಸೀನದ ಸರಕಾರ ಎಲ್ಲಿಯೂ ನೋಡಿಲ್ಲ – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೇಸ್ ನ ಉದಾಸೀನದ ಸರಕಾರ ಎಲ್ಲಿಯೂ ನೋಡಿಲ್ಲ – ಪ್ರಧಾನಿ ನರೇಂದ್ರ ಮೋದಿ

ಉಡುಪಿ ಮೇ 1: ರಾಜ್ಯದಲ್ಲಿರುವ ಕಾಂಗ್ರೇಸ್ ಸರಕಾರ ಗಲಾಟೆ, ದೊಂಬಿ ಬಿಟ್ಟರೆ ಬೇರೇನೂ ಮಾಡಿಲ್ಲ, ಕಾಂಗ್ರೇಸ್ ನ ಉದಾಸೀನದ ಸರಕಾರವನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಇಂದು ನಡೆ ಬೃಹತ್ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಎನ್ನ ಪ್ರೀತಿದ ಮಾತೆರೆಗ್ ನಮಸ್ಕಾರ ಎಂದು ತುಳುವಿನಲ್ಲಿ ಭಾಷಣವನ್ನು ಪ್ರಾರಂಭಿಸಿದರು. ಭಾಷಣದುದ್ದಕ್ಕೂ ಕಾಂಗ್ಸೇಸ್ ಸರಕಾರದ ವಿರುದ್ದ ಹರಿಹಾಯ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಗೆ ಬಡವರ ಕಣ್ಣಿರು ಬಡತನ ಸರಿದೂಗಿಸಲು ಸಾದ್ಯವಾಗಲಿಲ್ಲ ಇಂತಹ ಸರಕಾರ ಕಿತ್ತು ಎಸೆಯಬೇಕು.

ಕಾಂಗ್ರೆಸ್  ದಶಕಗಳ ಕಾಲ ದೇಶವನ್ನು ಲೂಟಿ ಮಾಡಿದೆ, ಇದನ್ನು ಬಿಟ್ರೆ ಬೇರೆ ಏನು ಮಾಡಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ದಲ್ಲಿ ಹಿಂಸೆಯ ರಾಜಕಾರಣವನ್ನು ಕಾಂಗ್ರೇಸ್ ಮಾಡುತ್ತಿದ್ದು, ಅಪರಾಧಿಗಳಿಗೆ ಕಾನೂನು ರಕ್ಷಣೆ ನೀಡುತ್ತಿದೆ ಎಂದರು.

ಕರ್ನಾಟಕದಲ್ಲಿ  ಮರಳು ಮಾಫಿಯಾ ನಡೆಯುತ್ತಿದೆ. ಈ ಮರಳು ಮಾಪಿಯದ ಹಿಂದೆ  ಕಾಂಗ್ರೆಸ್ ರಾಜಕಾರಣಿ ಗಳಕೈವಾಡ ಇದೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೇಸ್ ನ ಉದಾಸೀನದ ಸರಕಾರವನ್ನು ಎಲ್ಲಿಯೂ ನೋಡಿಲ್ಲ ಎಂದು ಹೇಳಿದರು. ಸ್ವಚ್ಚ ಸುಂದರ ಕರ್ನಾಟಕ ನಿರ್ಮಿಸೋಣ ಬನ್ನಿ….. ಎಲ್ಲರೂ ಕೈ ಜೊಡಿಸಿ ಸರಕಾರ ಬದಲಿಸಿ ಎಂದು ಕನ್ನಡದಲ್ಲಿ ಹೇಳಿ ತಮ್ಮ ಭಾಷಣ ಮುಗಿಸಿದರು.