Connect with us

LATEST NEWS

ಕಂಠಪೂರ್ತಿ ಕುಡಿದು ಸೇನಾ ವಾಹನ ಅಡ್ಡಗಟ್ಟಿ ಮಾಡೆಲ್ ರಾದ್ದಾಂತ

ಗ್ವಾಲಿಯರ್: ಫುಲ್ ಟೈಟ್ ಆಗಿರುವ ಮಾಡೆಲ್ ಒಬ್ಬಳು ನಡುರಸ್ತೆಯಲ್ಲಿ ಸೇನಾ ವಾಹನವನ್ನು ತಡೆದು ಗಲಾಟೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
22 ವರ್ಷದ ಯುವತಿ ಮಾಡೆಲ್ ಎಂದು ತಿಳಿದುಬಂದಿದೆ. ಆಕೆ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಸಂಜೆ ಸಂದರ್ಭ ಜನ ನಿಬಿಡ ರಸ್ತೆಯೊಂದರಲ್ಲಿ ಸೇನಾ ವಾಹನವನ್ನು ತಡೆದು ಅದಕ್ಕೆ ಒರಗಿಕೊಂಡು ಫೋನ್ನಲ್ಲಿ ಮಾತನಾಡುತ್ತಿರುತ್ತಾಳೆ. ಈ ವೇಳೆ ಎಷ್ಟೇ ಹಾರ್ನ್ ಮಾಡಿದರೂ ಆಕೆ ದಾರಿಯನ್ನು ಬಿಡುವುದಿಲ್ಲ. ಕಾರಿನ ಎದುರಿಗೆ ತಿರುಗಿ ಒಳಗೆ ಕುಳಿತಿದ್ದ ಯೋಧನನ್ನು ನಿಂದಿಸಲು ಶುರು ಮಾಡುತ್ತಾಳೆ. ಬಳಿಕ ಮಾತನಾಡುವುದನ್ನು ಮುಂದುವರಿಸುತ್ತಲೇ ಸೇನಾ ಕಾರಿಗೆ ಕಾಲಿನಿಂದ ಒದೆಯುತ್ತಾಳೆ. ಈ ವೇಳೆ ಅವಳ ಬ್ಯಾಗ್ನಿಂದ ಒಂದು ಮದ್ಯದ ಬಾಟಲ್ ರಸ್ತೆ ಬಿದ್ದು ಚೂರಾಗುತ್ತದೆ. ಅದನ್ನು ಗಮನಿಸಿದ ಮಾಡೆಲ್, ಕಾರು ಒದೆಯುವುದನ್ನು ಮುಂದುವರಿಸುತ್ತಾಳೆ. ಅದನ್ನು ನೋಡಿ ಕಾರಿನ ಒಳಗಿದ್ದ ಯೋಧ ಕೆಳಗಿಳಿದು ಬರುತ್ತಾರೆ. ಆದರೆ, ಅವರಿಗೂ ಕ್ಯಾರೆ ಎನ್ನದ ಯುವತಿ, ಯೋಧನನ್ನು ನೂಕುತ್ತಾಳೆ. ಕೊನೆಗೆ ದಾರಿ ಬಿಡುತ್ತಾಳೆ.


ಈ ಘಟನೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.