Connect with us

DAKSHINA KANNADA

ಕಡಬ – ದುಷ್ಕರ್ಮಿಗಳಿಂದ ಗಣಪತಿ ಕಟ್ಟೆಗೆ ಹಾನಿ

ನೆಲ್ಯಾಡಿ: ನಿನ್ನೆ ಗಣೇಶ ಚತುರ್ಥಿಯಂದು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗಣಪತಿ ಕಟ್ಟೆಗೆ ದುಷ್ಕರ್ಮಿಗಳು ಹಾನಿ ಮಾಡಿರುವ ಘಟನೆ ಕಡಬ ತಾಲೂಕಿನ ಉದನೆ ಎಂಬಲ್ಲಿ ನಡೆದಿದೆ.


ಉದನೆಯ ಈ ಗಣಪತಿ ಕಟ್ಟೆಯಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ಸಾರ್ವಜನಿಕ ಗಣೇಶೋತ್ಸವವನ್ನು ಸ್ಥಳೀಯ ಸಮಿತಿಯೂ ಆಯೋಜಿಸುತ್ತದೆ. ಈ ಬಾರಿ 19 ನೇ ವರ್ಷದ ಗಣೇಶೋತ್ಸವ ಅಲ್ಲಿ ಜರುಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ .ಸರಳವಾಗಿ ಆಚರಿಸಲಾಗಿತ್ತು . ಸಂಜೆಯ ವೇಳೆಗೆ ಗಣಪತಿ ಮೂರ್ತಿಯ ವಿಸರ್ಜನೆಯನ್ನು ನಡೆಸಲಾಗಿತ್ತು.


ಈ ಹಿನ್ನಲೆ ಗಣಪತಿ ಕಟ್ಟೆಯಲ್ಲಿ ದೇವರ ಅಲಂಕಾರಕ್ಕಾಗಿ ಇಟ್ಟ ವಸ್ತುಗಳು, ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಬಾಳೆಗಿಡಗಳನ್ನು ಪುಡಿಗೈಯ್ಯಲಾಗಿದ್ದು ಮೆಟ್ಟಿಲನ್ನು ಹಾನಿಗೊಳಿಸಲಾಗಿದೆ. ಕಲ್ಲು ಎತ್ತಿಹಾಕಿ ಮೆಟ್ಟಿಲು ಹಾನಿಗೊಳಿಸಿರುವುದಾಗಿ ಕಂಡು ಬಂದಿದೆ. ರಾತ್ರಿ ಸಂದರ್ಭ ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.