Connect with us

FILM

ಚೀತಾ ಜೊತೆ ಮಾಡೆಲ್ ಕ್ಯಾಟ್ ವಾಕ್ – ವಿಡಿಯೋ ವೈರಲ್

ಮುಂಬೈ ಎಪ್ರಿಲ್ 26: ಮಾಡೆಲ್ ಗಳು ರಾಂಪ್ ವೇಲೆ ಕ್ಯಾಟ್ ವಾಕ್ ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಯುವತಿ ಬಿಕಿನಿ ಧರಿಸಿ ಚೀತಾದ ಪಂಜರದೊಳಗೆ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.


ಮಾಡೆಲ್ ಆಗಿರುವ ಸಿದ್ದಿಕಾ ಶರ್ಮಾ ಅವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಕಿನಿ ಧರಿಸಿ ಚೀತಾ ಜೊತೆ ಪಂಜರದೊಳಗೆ ಹಾಯಾಗಿ ಸಮಯ ಕಳೆಯುತ್ತಿದ್ದು, ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಆಕೆಯ ಧೈರ್ಯಕ್ಕೆ ಮೆಚ್ಚಿದ್ದಾರೆ.


ಈ ವೈರಲ್​ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವೊಂದಿಷ್ಟು ಆಕೆಯ ಬ್ಯೂಟಿ ನೋಡಿ ವಾವ್​​, ಸೂಪರ್​​​ ಎಂದು ಕಾಮೆಂಟ್​​ ಮಾಡಿದರೆ, ಇನ್ನೂ ಕೆಲವರು ಆಕೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಪ್ರಾಣಿ ಪ್ರಿಯರು ಕಾಡು ಪ್ರಾಣಿಗಳನ್ನು ಪಂಜರದೊಳಗಿಟ್ಟು ಅದಕ್ಕೆ ಹಿಂಸೆ ನೀಡುವುದು ಸರಿಯಲ್ಲ ಎಂದು ಕಾಮೆಂಟ್​​​ನಲ್ಲಿ ಬರೆದುಕೊಂಡಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *