LATEST NEWS
ಮಾಜಿ ಶಾಸಕ ರಘುಪತಿ ಭಟ್ ವಿರುದ್ದ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ – ರಘುಪತಿ ಭಟ್ ಸಾಲಗಾರ.. ನ್ಯಾಯಾಧೀಶರಲ್ಲ…!!
ಉಡುಪಿ ನವೆಂಬರ್ 09: ಬುರ್ಖಾ ಹಾಕಿಕೊಂಡು ದನದ ಮಾಂಸ ತಿನ್ನುವವರು ದೇವರ ಪ್ರಮಾಣ ಮಾಡಿದರೆ ನಾನು ನಂಬಲು ತಯಾರಿಲ್ಲ, ಬ್ಯಾಂಕ್ ಅವ್ಯವಹಾರದ ಆರೋಪದ ಕುರಿತು ಯಾವುದೇ ತನಿಖೆಗೆ ಸಿದ್ದ ಎಂದು ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ರಘುಪತಿ ಭಟ್ ನಮ್ಮ ಬ್ಯಾಂಕಿನ ನಮ್ಮ ಗ್ರಾಹಕರು. ರಘುಪತಿ ಭಟ್ ಅವರು ನಮ್ಮ ಬ್ಯಾಂಕಿನ ಸಾಲಗಾರರೇ ಹೊರತು, ನ್ಯಾಯಾಧೀಶರಲ್ಲ. ಬ್ಯಾಂಕಿನ ಏಳಿಗೆ ಸಹಿಸಲಾಗದೇ, ದುರುದ್ದೇಶದಿಂದ ಇವರು ಅಪವಾದವನ್ನು ಹೊರಿಸಿದ್ದಾರೆ. ನ್ಯಾಯಕ್ಕಾಗಿ ನಾವು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಹೋಗಲು ಸಿದ್ಧರಿದ್ದೇವೆ” ಎಂದು ಯಶಪಾಲ್ ಸುವರ್ಣ ಈ ಸಂದರ್ಭದಲ್ಲಿ ಹೇಳಿದರು.
ಬಾಗಿಲು ಮುಚ್ಚಿರುವ ಕಮಲಾಕ್ಷ ಸೊಸೈಟಿ ಬಗ್ಗೆ ಮಾತನಾಡಿ, ಅಲ್ಲಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿ. ನಾನು ರಾಜಕೀಯವನ್ನು ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ. ಹಿಂದುತ್ವ ಮತ್ತು ಸಮಾಜಸೇವೆ ನನ್ನ ಧ್ಯೇಯ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ. ಶಾಸಕತ್ವ ಮತ್ತು ಬ್ಯಾಂಕ್ ಮುಳ್ಳಿನ ಹಾಸಿಗೆಯಲ್ಲಿ ಮಲಗಿದ ರೀತಿ. ಮಾನ್ಯತೆ ಪಡೆದ ಆಡಿಟ್ ರಿಪೋರ್ಟ್ ನಮ್ಮ ಬಳಿಯಿದೆ. ರಘುಪತಿ ಭಟ್ ಬಳಿ ಹೋದವರು, ಸಂತ್ರಸ್ತರು ಅಲ್ಲ, ಮಾಧ್ಯಮದ ಮುಂದೆ ಬಂದ ಆ ಗ್ರಾಹಕರು, ಕೋರ್ಟ್ ನಲ್ಲಿ ತಪ್ಪಿತಸ್ಥರು ಅಂತ ಸಾಬೀತಾದರೆ ಅದರ ಜವಾಬ್ದಾರಿಯನ್ನು ರಘುಪತಿ ಭಟ್ ತೆಗೆದುಕೊಳ್ಳುತ್ತಾರಾ ಎಂದು ಯಶಪಾಲ್ ಸುವರ್ಣ ಪ್ರಶ್ನಿಸಿದ್ದಾರೆ.
ದನದ ಮಾಂಸ ತಿನ್ನುವವರು ದೇವರ ಪ್ರಮಾಣ ಮಾಡಿದರೆ ನಾನು ನಂಬಲು ತಯಾರಿಲ್ಲ. ಮಾನನಷ್ಟ ಮೊಕದ್ದಮೆ, ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ರಘುಪತಿ ಭಟ್ ನಮ್ಮ ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲವನ್ನು ಒಂದು ವಾರದೊಳಗೆ ಹಿಂದಿರುಗಿಸಲು ನೋಟಿಸ್ ನೀಡಲಾಗಿದೆ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.