
ಮಂಗಳೂರು ನವೆಂಬರ್ 09: ಹದಗೆಟ್ಟ ರಸ್ತೆ ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಸ್ಕೂಟರ್ ನಲ್ಲಿ ಪತಿ ಜೊತೆ ತೆರಳುತ್ತಿದ್ದ ವೇಳೆ ಗುಂಡಿಗೆ ಸ್ಕೂಟರ್ ಬಿದ್ದು ರಸ್ತೆಗೆಸೆಯಲ್ಪಟ್ಟ ಮಹಿಳೆ ಮೇಲೆ ಕಂಟೈನರ್ ಲಾರಿ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ನಡೆದಿದೆ.

ಮೃತ ಮಹಿಳೆಯನ್ನು ರಹೆಮತ್ (45) ಎಂದು ಗುರುತಿಸಲಾಗಿದ್ದು, ರೆಹಮತ್ ಅವರ ಪತಿ ರಶೀದ್ ಜೊತೆ ಆಕ್ಟಿವಾ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಹದಗೆಟ್ಟ ರಸ್ತೆ ಗುಂಡಿಗೆ ಸ್ಕೂಟರ್ ಬಿದ್ದಿದೆ. ಪರಿಣಾಮ ಸ್ಕೂಟರ್ ಸಹ ಸವಾರೆ ರಶೀದ್ ಅವರ ಪತ್ನಿ ರೆಹಮತ್ ರಸ್ತೆಗೆಸೆಯಲ್ಪಟ್ಟಿದ್ದು ಆಕೆಯ ಮೇಲೆ ಹಿಂದಿನಿಂದ ಬರುತ್ತಿದ್ದ ಕಂಟೈನರ್ ಲಾರಿ ಹರಿದಿದೆ. ಸ್ಥಳದಲ್ಲೇ ಸಾವನಪ್ಪಿದ್ದಾರೆ. ರಶೀದ್ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ತೊಕ್ಕೊಟ್ಟು-ಚೆಂಬುಗುಡ್ಡೆ ಸಂಪರ್ಕದ ಮಂಗಳೂರು ವಿವಿ ರಸ್ತೆಯು ಹೊಂಡ ಗುಂಡಿಗಳಿಂದ ಹದಗೆಟ್ಟಿದೆ. ಅಧಿಕಾರಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ದಿಢೀರ್ ಪ್ರತಿಭಟನೆಯಿಂದಾಗಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು ಕೊಣಾಜೆ, ಮುಡಿಪುವಿಗೆ ತೆರಳುವ ವಾಹನ ಸವಾರರು ಪರದಾಡುವಂತಾಗಿದೆ.
Breaking news…
ಮೂಡಬಿದಿರೆ -ಖಾಸಗಿ ಬಸ್ ಓವರ್ ಟೇಕ್ ಭರಟೆ, ಸ್ಕೂಟರ್ ಗೆ ಬಸ್ ಡಿಕ್ಕಿ ತಾಯಿ ಮಗಳಿಗೆ ಗಂಭೀರ ಗಾಯ





