Connect with us

  BANTWAL

  ಅಯೋಧ್ಯಾಧಿಪತಿ ರಾಮ್ ಲಲ್ಲಾಗೆ ಬೆಳ್ಳಿ ಕಲಶಗಳ ಅಭಿಷೇಕ ಸೇವೆಯ ಭಾಗ್ಯ ಪಡೆದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

  ಅಯೋಧ್ಯೆ ಫೆಬ್ರವರಿ 08: ಬಂಟ್ವಾಳ ‌ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕುಟುಂಬ ಸಮೇತರಾಗಿ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮ ದೇವರ ದರ್ಶನ ಪಡೆದಿದ್ದಾರೆ.


  ಅಯೋಧ್ಯೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಅಂಗವಾಗಿ ನಡೆದ ಕಲಶಾರಾಧನೆ ಮತ್ತು ಎರಡು ಬೆಳ್ಳಿ ಕಲಶಗಳ ಅಭಿಷೇಕದ ಪುಣ್ಯ ಕಾರ್ಯದಲ್ಲಿ ಸೇವಾಕರ್ತರಾಗಿ ಶಾಸಕರು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀರಾಮನ ಸೇವೆಗೈದು,ಆಶೀರ್ವಾದ ಪಡೆದಿದ್ದಾರೆ. ಶಾಸಕರ ಪತ್ನಿ ಉಷಾ ಆರ್.ನಾಯಕ್, ಪುತ್ರ ಉನ್ನತ್ ನಾಯಕ್,ಸೊಸೆ ಶ್ರೀಶಾ ನಾಯಕ್ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply