DAKSHINA KANNADA
ಅಕ್ಷಯ್ ಕೊಲೆ ಪೊಲೀಸ್ ಇಲಾಖೆ ವೈಫಲ್ಯ ಅಲ್ಲ – ಶಾಸಕ ಅಶೋಕ್ ರೈ

ಪುತ್ತೂರು ನವೆಂಬರ್ 7: ಅಕ್ಷಯ್ ಕಲ್ಲೇಗ ಕೊಲೆ ಗೆಳೆಯರ ನಡುವೆ ನಡೆದ ಗಲಾಟೆಯಿಂದ ಆಗಿದ್ದು, ಇದು ಪೊಲೀಸ್ ಇಲಾಖೆಯ ವೈಫಲ್ಯ ಅಂತ ಹೇಳಲಿಕ್ಕ ಆಗುವುದಿಲ್ಲ ಎಂದು ಶಾಸಕ ಅಶೋಕ ರೈ ತಿಳಿಸಿದ್ದಾರೆ.
ಗೆಳೆಯರಿಂದಲೇ ಹತ್ಯೆಗೀಡಾಗಿದ್ದ ಅಕ್ಷಯ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಶಾಸಕ ಅಶೋಕ್ ರೈ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಕೊಲೆ ಮಾಡಿರುವ ಆರೋಪಿಗಳು ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ಪುತ್ತೂರಿನ ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಗೆಳೆಯರ ನಡುವಿನ ಕ್ಷುಲ್ಲಕ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಈಗಾಗಲೇ ಪೊಲೀಸ್ ಇಲಾಖೆಯ ಮುಖ್ಯಸ್ಥರ ಜೊತೆ ಮಾತನಾಡಿದ್ದು, ಪುತ್ತೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದರು. ದೇಶದ ಕಾನೂನಿನಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದ್ದು, ಇವತ್ತು ಬಂಧನವಾದವರು 3 ತಿಂಗಳ ಬಳಿಕ ಹೊರ ಬರುತ್ತಾರೆ. ಹಾಗೆ ಆಗಬಾರದು.ವಿದೇಶದಂತೆ ಮೂರು ತಿಂಗಳ ಒಳಗೆ ಶಿಕ್ಷೆ ವಿಧಿಸಬೇಕು.ಇಂತಹ ಕಾನೂನು ನಮ್ಮಲ್ಲಿ ಬರಬೇಕೆಂದರು.