DAKSHINA KANNADA
ಮಂಗಳೂರು ‘ಮಟ್ಕಾ’ ನಿರತರಿಗೆ ‘ತಡ್ಕ’ ನೀಡಿದ ಉಳ್ಳಾಲ ಪೊಲೀಸರು..!
ಉಳ್ಳಾಲ : ಉಳ್ಳಾಲ ಠಾಣಾ ವ್ಯಾಪ್ತಿಯ ಒಳಪೇ ಟೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ಉಳ್ಳಾಲ ಪೊಲೀಸರು ದಾಳಿ ನಡಸಿ ನಾಲ್ವರನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಬೆಳ್ಮ ರೆಂಜಾಡಿ ನಿವಾಸಿ ಖಾದರ್ ಮೊಯ್ದಿನ್ (60), ತೊಕ್ಕೋಟ್ಟು ಒಳಪೇಟೆಯ ಫಕೀರಬ್ಬ, ಮಂಜನಾಡಿಯ ಮುಸ್ತಫಾ (52) ಹಾಗೂ ಉಲ್ಳಾಲ ಬೈಲ್ ನ ಮಧುಸೂದನ್(50) ಎಮಭ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3,260ರೂ. ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
You must be logged in to post a comment Login