ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಂಗಾರಗೆ ಅವಮಾನ ದೂರು ಸಲ್ಲಿಕೆ

ಸುಳ್ಯ ಮಾರ್ಚ್ 29: ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎಸ್. ಅಂಗಾರ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಫೇಸ್ ಬುಕ್ ಖಾತೆಯೊಂದರಲ್ಲಿ ಕೋಟಿ ಚೆನ್ನಯ್ಯರ ನಾಡಿನಲ್ಲಿ ಲೂಟಿ ಚೆನ್ನಯ್ಯ ಎಂಬ ಪದ ಬಳಸಿ ಶಾಸಕರನ್ನು ನಿಂದಿಸಲಾಗಿದೆ.
ಜತೆಗೆ ತುಳುನಾಡಿನ ವೀರಪುರುಷರ ಹೆಸರು ಬಳಸಿದ್ದು, ಅವರಿಗೂ ಅವಮಾನ ಮಾಡಲಾಗಿದೆ. ಆತನ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಮಧ್ಯೆ ಪ್ರಕರಣಕ್ಕೆ ಸಂಬಂದಿಸಿದ ಖಾತೆದಾರರನನ್ನು ಠಾಣೆಗೆ ಕರೆಯಿಸಿದ್ದು ಆತ ಕ್ಷಮೆ ಕೇಳಿದ್ದು ಮುಚ್ಚಳಿಕೆ ಪತ್ರ ಬರೆಸಿ ಎಚ್ಚರಿಕೆ ನೀಡಿ ಕಳಿಸಿರುವ ಮಾಹಿತಿ ಇದೆ.

Facebook Comments

comments