Connect with us

    BANTWAL

    ಬಂಟ್ವಾಳ :ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಿಸ್ಸಿಂಗ್ – ಸುಖಾಂತ್ಯ..!

    ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್  ಕಾರ್ಯದರ್ಶಿ ನಾಪತ್ತೆಯಾಗಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ನಾಪತ್ತೆಯಾಗಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ನಾಪತ್ತೆಯಾದ ಅಧಿಕಾರಿಯಾಗಿದ್ದಾರೆ.

    ಅವರ ಮೊಬೈಲ್ ಫೋನ್ ವಾಲ್ಪಾಡಿಯ ಕೊಯ ಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

    ಪಂಚಾಯತ್ ಕಾರ್ಯದರ್ಶಿಯಾಗಿರುವ ಲಕ್ಷ್ಮೀನಾರಾಯಣ ಅವರ ನಾಪತ್ತೆ ಬಗ್ಗೆ ಅವರ ಪತ್ನಿ ವಂದನಾ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

    ಅದರಂತೆ ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿದ್ದುದರಿಂದ ಪುಂಜಾಲ್ಕಟ್ಟೆ ಪೊಲೀಸರು ಮತ್ತು ಸಂಬಂಧಿಕರು ಹುಡುಕಾಡಿಕೊಂಡು ಬಂದಿದ್ದರು.

    ಅದರೆ ಅವರ ಮೊಬೈಲ್ ಮಾತ್ರ ರಸ್ತೆ ಬದಿ ಪತ್ತೆಯಾಗಿದ್ದು ಬೈಕ್ ನಲ್ಲಿ ಬಂದಿದ್ದ ಲಕ್ಷ್ಮೀನಾರಾಯಣ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ.

    ಕೆ.ಎ.-21 , EC 5599 ನಂಬರ್ ನ ಹೀರೊ ನೀಲಿ ಬಣ್ಣದ ಬೈಕ್ ನಲ್ಲಿ ಅವರು ಬಂದಿದ್ದರೆನ್ನಲಾಗಿದೆ‌ .

    ಮೊಬೈಲ್ ನ್ನು ವಾಲ್ಪಾಡಿಯಲ್ಲಿ ಎಸೆದು ಬೈಕ್ ನಲ್ಲಿ ಹೋಗಿರಬಹುದೆಂದು ಹೇಳಲಾಗುತ್ತಿದೆ. ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

    ಸೆ. 8 ರಂದು ಅಮ್ಟಾಡಿ ಗ್ರಾ.ಪಂ‌‌.ನಲ್ಲಿ ಗ್ರಾಮ ಸಭೆ ನಡೆದ ಬಳಿಕ ಇವರು ತುಂಬಾ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ.

    ಮಾನಸಿಕವಾಗಿ ನೊಂದುಕೊಂಡಿದ್ದ ಅವರು ಇತ್ತೀಚೆಗೆ ಬಹಳಷ್ಟು ಕುಗ್ಗಿ ಹೋಗಿದ್ದರು.

    ಇಲ್ಲಿನ ಪಿ.ಡಿ.ಒ.ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಇವರಿಗೆ ಹೆಚ್ಚವರಿಯಾಗಿ ಪಿ.ಡಿ.ಒ.ಹುದ್ದೆಯನ್ನು ನೀಡಲಾಗಿತ್ತು.

    ಆದರೆ ಇವರು ಎರಡು ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗದೆ ನೊಂದುಕೊಂಡಿದ್ದರು ಎನ್ನಲಾಗಿದೆ.

    ಒತ್ತಡದಿಂದ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಾ? ಎಂಬ ಪ್ರಶ್ನೆಯೂ ಕಾಡುತ್ತಿದೆ.

    ಅವರು ಸೆ. 12 ರಂದು ಮಧ್ಯಾಹ್ನ 12 ಗಂಟೆವರೆಗೆ ಆಫೀಸಿಗೆ ಬರದ ಕಾರಣ ಇಲ್ಲಿನ ಸಿಬ್ಬಂದಿ ಪೋನ್ ಮಾಡಿದಾಗ ನನಗೆ ಹುಷಾರಿಲ್ಲ ಕೆಲವೊಂದು ಟೆಸ್ಟ್ ಗಳನ್ನು ಇಸಿಜಿ ‌ಸಹಿತ ಇನ್ನೂ ಕೆಲವು ಪರೀಕ್ಷೆ ನಡೆಸಿ ಮತ್ತೆ ಬರುವುದಾಗಿ ತಿಳಿಸಿದ್ದರಂತೆ.

    ಆ ಬಳಿಕ ಅಫೀಸಿಗೆ ಬರದೆ ಮನೆಗೂ ಹೋಗದೆ ಪೋನ್ ಸ್ವೀಚ್ ಆಫ್ ಆಗಿದ್ದು ಪತ್ತೆಯಿಲ್ಲ ಎಂದು ಹೇಳಲಾಗಿದ್ದು ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.

    ಪ್ರಕರಣ ಸುಖಾಂತ್ಯ :

    ಇದೀಗ ಬಂದ ಮಾಹಿತಿ ಪ್ರಕಾರ ಅಮ್ಟಾಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಬೆಳ್ತಂಗಡಿಯ ವೇಣೂರಿನಲ್ಲಿ ಪತ್ತೆಯಾಗಿದ್ದಾರೆ ಎಂದ ಮಾಹಿತಿ ಲಭ್ಯವಾಗಿದ್ದು  ಈ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.  

    Share Information
    Advertisement
    Click to comment

    You must be logged in to post a comment Login

    Leave a Reply